alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಹೊಟ್ಟೆಯಲ್ಲಿದ್ದ ವಸ್ತು ನೋಡಿ ದಂಗಾದ್ರು ವೈದ್ಯರು

ಮಧ್ಯಪ್ರದೇಶದ ಇಂದೋರ್ ನಲ್ಲಿ ಮಹಿಳೆಯ ಹೊಟ್ಟೆಯಲ್ಲಿ ಸುಮಾರು ಒಂದೂವರೆ ಕೆಜಿ ಕೂದಲು ಪತ್ತೆಯಾಗಿದೆ. 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಮಹಾರಾಜಾ ಯಶ್ವಂತ್ ರಾವ್ ಆಸ್ಪತ್ರೆಯ ವೈದ್ಯರು ಅದನ್ನು ಹೊರತೆಗೆದಿದ್ದಾರೆ.

25 ವರ್ಷದ ಆ ಮಹಿಳೆ ಮಾನಸಿಕ ಅಸ್ವಸ್ಥೆ. ತನ್ನದೇ ಕೂದಲನ್ನು ಕಿತ್ತುಕೊಂಡು ಅದನ್ನು ಜಗಿದು ನುಂಗುವ ಅಭ್ಯಾಸ ಅವಳಿಗಿತ್ತು. ಈ ರೀತಿ ಕೂದಲು ತಿಂದು ತಿಂದು ಹೊಟ್ಟೆಯಲ್ಲಿ ದೊಡ್ಡ ಗಡ್ಡೆಯಂತಾಗಿಬಿಟ್ಟಿತ್ತು.

ಸುಮಾರು ಒಂದೂವರೆ ಕೆಜಿ ತೂಕದ ಕೂದಲಿನ ಬಾಲ್ ಹೊಟ್ಟೆಯೊಳಗಿತ್ತು. ಕೂದಲ ರಾಶಿಯನ್ನು ಹೊಟ್ಟೆಯೊಳಗಿನಿಂದ ಹೊರತೆಗೆಯದೇ ಇದ್ರೆ ಜೀವಕ್ಕೇ ಅಪಾಯವಾಗುವ ಸಾಧ್ಯತೆ ಇತ್ತು. ಡಾ.ಆರ್.ಕೆ. ಮಾಥುರ್ ನೇತೃತ್ವದ ಐವರು ವೈದ್ಯರ ತಂಡ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ, ಕೂದಲನ್ನು ಹೊರತೆಗೆದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...