alex Certify
ಕನ್ನಡ ದುನಿಯಾ       Mobile App
       

Kannada Duniya

2 ವರ್ಷಗಳ ಬಳಿಕ ಮೊದಲ ಬಾರಿ ನಕ್ಕಿತು ಮಗು

ಹುಟ್ಟಿದಾಗಿನಿಂದ್ಲೂ ಲಿಕ್ವಿಡ್ ಡಯಟ್ ನಲ್ಲಿದ್ದ ಹೆಣ್ಣು ಮಗು ಪ್ರಣಲಿ 2 ವರ್ಷಗಳ ಬಳಿಕ ಎಲ್ಲರಂತಾಗಿದ್ದಾಳೆ. ಹುಟ್ಟಿದಾಗ ಮಗುವಿನ ತೂಕ ತೀರಾ ಕಡಿಮೆಯಿತ್ತು. ಜಿಗೋಮಾಟಿಕ್ ಮ್ಯಾಂಡಿಬುಲರ್ ಸಿಗ್ನಾಥಿಯಾ ಎಂಬ ಸಮಸ್ಯೆಯಿಂದ ಮಗು ಬಳಲುತ್ತಿತ್ತು.

ಇದರಿಂದಾಗಿ ಅವಳ ಎರಡೂ ದವಡೆಯ ಮೂಳೆಗಳು ಅಂಟಿಕೊಂಡುಬಿಟ್ಟಿದ್ದವು. ಆಕೆಗೆ ಬಾಯಿ ತೆರೆಯಲು ಸಾಧ್ಯವಾಗುತ್ತಿರಲಿಲ್ಲ, ಮುಖದ ಎಡಭಾಗ ಬೆಳವಣಿಗೆಯೂ ಆಗಿರಲಿಲ್ಲ. ತೂಕ ಕಡಿಮೆ ಇದ್ದಿದ್ರಿಂದ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ಹಿಂಜರಿದಿದ್ರು.

ನಂತರ ಮಗುವಿನ ಪೋಷಕರು ಪುಣೆಯ ಆರ್ಮ್ಡ್ ಫೋರ್ಸಸ್ ಮೆಡಿಕಲ್ ಕಾಲೇಜಿನ ತಜ್ಞ ವೈದ್ಯರ ಸಲಹೆ ಕೇಳಿದ್ದಾರೆ. ಕಳೆದ ಆಗಸ್ಟ್ ನಲ್ಲಿ 18 ತಿಂಗಳ ಪ್ರಣಲಿಗೆ ವೈದ್ಯರು ಸರ್ಜರಿ ಮಾಡಿದ್ದಾರೆ. ಆಗ ಮಗು ಕೇವಲ 3.4 ಕೆಜಿ ತೂಕವಿತ್ತು. ಶಸ್ತ್ರಚಿಕಿತ್ಸೆ ನಡೆಸಿ 6 ತಿಂಗಳ ಬಳಿಕ ಮಗು ಸಂಪೂರ್ಣ ಚೇತರಿಸಿಕೊಂಡಿದೆ. ಮೊದಲ ಬಾರಿ ನಕ್ಕಿದ್ದಾಳೆ, ಎಲ್ಲರಂತೆ ಊಟ ಮಾಡ್ತಿದ್ದಾಳೆ. ಮಗುವಿನ ತೂಕ ಸಹ ಈಗ 10 ಕೆಜಿಗೆ ಏರಿಕೆಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...