alex Certify
ಕನ್ನಡ ದುನಿಯಾ       Mobile App
       

Kannada Duniya

ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಮಾವೇಶ

ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಸ್ಥೆಯ ವತಿಯಿಂದ ನ.10, 11 ಮತ್ತು 12ರಂದು ಶಿವಮೊಗ್ಗ ನಗರದ ಸಿಮ್ಸ್ ಮೆಡಿಕಲ್ ಕಾಲೇಜ್ ಆವರಣದಲ್ಲಿ ರಾಜ್ಯಮಟ್ಟದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ವಾರ್ಷಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಆಯೋಜನ ಸಮಿತಿಯ ವ್ಯವಸ್ಥಾಪಕ ಡಾ. ಮಲ್ಲೇಶ್ ಹುಲ್ಲಮನಿ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ಸಮಾವೇಶದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವೈಜ್ಞಾನಿಕ ಯಂತ್ರೋಪಕರಣ, ತಜ್ಞರ ನೆರವು ಬಳಸಿಕೊಂಡು ಕಾಲ ಕಾಲಕ್ಕೆ ಬದಲಾಗುವ ಜೀವನ ದುಸ್ತರಗಳನ್ನು ಹೇಗೆ ನಿಭಾಯಿಸಬೇಕು ಹಾಗೂ ಹೆರಿಗೆ ಸಂದರ್ಭದಲ್ಲಿ ಆಗುವ ಅನಾಹುತಗಳನ್ನು ಹೇಗೆ ನಿಯಂತ್ರಿಸಬೇಕು ಎಂಬುದರ ಬಗ್ಗೆ ಚರ್ಚೆ ಹಾಗೂ ಚಿಂತನೆ ನಡೆಯಲಿದೆ ಎಂದರು.

ಕ್ವಿಜ್ ರೂಪದಲ್ಲಿ ಸ್ನಾತಕೋತ್ತರ ಪದವೀಧರರ ನೇರ ಮುಖಾಮುಖಿಯಲ್ಲಿ ಕಾರ್ಯಗಾರ, ಚರ್ಚೆ, ಆಶುಭಾಷಣ ಮತ್ತು ವೈಜ್ಞಾನಿಕ ಚರ್ಚೆಗಳೊಂದಿಗೆ ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಮಗುವಿಗೆ ಆಗುವ ತೊಂದರೆ ಹಾಗೂ ಸಾವುಗಳನ್ನು ಹೇಗೆ ನಿಯಂತ್ರಿಸಬಹುದು ಎಂಬುದರ ಬಗ್ಗೆ ಸಂವಾದ ನಡೆಯಲಿದೆ ಎಂದರು.

ರಾಜ್ಯದಲ್ಲಿ 1200ಕ್ಕೂ ಹೆಚ್ಚು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಿದ್ದು, ಈಗಾಗಲೇ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕೆ ಸುಮಾರು 950 ವೈದ್ಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ರಾಜ್ಯದ 40 ಕಾಲೇಜುಗಳಿಂದ 400 ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ 300 ಸರ್ಕಾರಿ ವೈದ್ಯರು ಭಾಗವಹಿಸಲಿದ್ದಾರೆ ಎಂದರು.

ನ.10ರ ಸಂಜೆ 6.30ಕ್ಕೆ ಐಎಂಎ ಹಾಲ್ ನಲ್ಲಿ ನಡೆಯುವ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ.ವಿ.ಪಿ.ಪಿಳ್ಳೆ, ಡಾ. ಬಿ.ವಿ.ಸುಶೀಲ್ ಕುಮಾರ್, ಡಾ.ಆರ್.ಬಿ. ಪುರುಷೋತ್ತಮ್, ಡಾ. ಎಂ.ಜಿ. ಹಿರೇಮಠ್ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ರಾಜ್ಯ ಸಂಘದ ಅಧ್ಯಕ್ಷೆ ಡಾ.ವಿದ್ಯಾಭಟ್ ವಹಿಸಲಿದ್ದಾರೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

11ರ ಬೆಳಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ತಜ್ಞ ವೈದ್ಯರಿಂದ ಚರ್ಚೆ ಹಾಗೂ ಸಂವಾದ, 5ರಿಂದ ಕ್ವಿಜ್, 5.30ಕ್ಕೆ ಸಂಘದ ಸರ್ವ ಸದಸ್ಯರ ಸಭೆ, 7 ಗಂಟೆಗೆ ಕಂಟ್ರಿಕ್ಲಬ್ ಆವರಣದಲ್ಲಿ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಹಾಸ್ಯ ಸಂಜೆ ಹಾಗೂ ಯಕ್ಷಗಾನ ನಡೆಯಲಿದೆ ಎಂದರು.

12ರ ಬೆಳಗ್ಗೆ 9.30ರಿಂದ ತಜ್ಞರೊಂದಿಗೆ ಮಾಹಿತಿ, ಚರ್ಚೆ, ಸಂವಾದ ನಡೆದು ಸಂಜೆ 4.15ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...