alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಡಿಗೆ ಮನೆಯಲ್ಲಿರುವವರನ್ನು ಕಾಡುತ್ತೆ ಈ ಆರೋಗ್ಯ ಸಮಸ್ಯೆ

rent-1

ನಿಮ್ಮ ಮಾನಸಿಕ ಆರೋಗ್ಯ ಹಲವಾರು ವಿಚಾರಗಳನ್ನು ಆಧರಿಸಿದೆ. ಅವುಗಳಲ್ಲಿ ನಿಮ್ಮ ಮನೆ ಕೂಡ ಒಂದು. ದೀರ್ಘಕಾಲದಿಂದ ಬಾಡಿಗೆ ಮನೆಯಲ್ಲಿರುವವರು ಖಿನ್ನತೆಯಿಂದ ಬಳಲುವ ಸಾಧ್ಯತೆಗಳು ಹೆಚ್ಚು. ಸ್ವಂತ ಮನೆ ಖರೀದಿ ಮನುಷ್ಯನ ಜೀವನದ ಅತಿ ದೊಡ್ಡ ಬೆಳವಣಿಗೆ.

ಇದರಿಂದ ಒಂದು ರೀತಿಯ ಭದ್ರತೆಯ ಭಾವನೆ ಬರುತ್ತದೆ. ಹಾಗಾಗಿ ಮನೆ ಪ್ರತಿಯೊಬ್ಬರ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ರೆ ವಿಪರೀತ ಬೆಲೆ ಏರಿಕೆಯಿಂದಾಗಿ ಸ್ವಂತ ಮನೆ ಜನಸಾಮಾನ್ಯರ ಪಾಲಿಗೆ ನನಸಾಗದ ಕನಸಿನಂತಾಗಿದೆ.

ಬ್ರಿಟನ್ ನ ಮ್ಯಾಂಚೆಸ್ಟರ್ ಯೂನಿವರ್ಸಿಟಿಯ ವಿಜ್ಞಾನಿಗಳು 50 ವರ್ಷಕ್ಕೂ ಮೇಲ್ಪಟ್ಟ 7500 ಜನರನ್ನು ಸಮೀಕ್ಷೆಗೆ ಒಳಪಡಿಸಿ ಈ ತೀರ್ಮಾನಕ್ಕೆ ಬಂದಿದ್ದಾರೆ. ಬಹುಕಾಲದ ವರೆಗೆ ಬಾಡಿಗೆ ಮನೆಯಲ್ಲಿರುವವರಲ್ಲಿ ಖಿನ್ನತೆ ಮತ್ತು ಇತರ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡು ಬಂದಿವೆ. ಬಾಡಿಗೆ ಮನೆ ಜನರ ಜೀವನ ಮಟ್ಟದ ಮೇಲೆ ಕೂಡ ದುಷ್ಪರಿಣಾಮ ಬೀರುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...