alex Certify
ಕನ್ನಡ ದುನಿಯಾ       Mobile App
       

Kannada Duniya

ಹೋಳಿ ವೇಳೆ ಭಾಂಗ್ ನಶೆ ಇಳಿಸಲು ಇದನ್ನು ಮಾತ್ರ ಸೇವಿಸಬೇಡಿ

ಹೋಳಿ ಒಂದು ಮೋಜಿನ ಉತ್ಸವ. ಬಣ್ಣ, ಪಿಚಕಾರಿ, ಹಾಡು, ನೃತ್ಯದ ಜೊತೆ ಹಾಲಿಗೆ ಭಾಂಗ್ ಬೆರೆಸಿ ಕುಡಿಯೋದ್ರ ಮಜವೇ ಬೇರೆ ಎನ್ನುತ್ತಾರೆ ಹೋಳಿ ಆಚರಿಸುವವರು. ಒಂದು ವೇಳೆ ಮರುದಿನದವರೆಗೆ ಭಾಂಗ್ ನಶೆ ಇಳಿಯದೇ ಹೋದ್ರೆ ತಲೆನೋವು ಬರೋದು ನಿಶ್ಚಿತ.

ಅನೇಕರಿಗೆ ಭಾಂಗ್ ಕುಡಿಯುವ ಅಭ್ಯಾಸವಿರುವುದಿಲ್ಲ. ಅಂಥವರಿಗೆ ತಲೆನೋವು ಬಂದೇ ಬರುತ್ತದೆ. ತುಂಬಾ ಹೊತ್ತು ಬಿಸಿಲಿನಲ್ಲಿರುವುದ್ರಿಂದ, ಕರಿದ ತಿಂಡಿಗಳನ್ನು ತಿನ್ನುವುದ್ರಿಂದ ಭಾಂಗ್ ಹ್ಯಾಂಗೊವರನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.

ಎಣ್ಣೆಯಲ್ಲಿ ಕರಿದ ತಿಂಡಿ, ಹುಳಿ ಪದಾರ್ಥ, ಕಿತ್ತಳೆ ಹಣ್ಣು, ಬರ್ಗರ್, ಆಲ್ಕೋಹಾಲ್ ಸೇವನೆ ಮಾಡುವುದ್ರಿಂದ ತಲೆನೋವು ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಭಾಂಗ್ ಹ್ಯಾಂಗೊವರ್ ಕಡಿಮೆ ಮಾಡಲು ಕಾಫಿ ಬೆಸ್ಟ್ ಎನ್ನುವವರಿದ್ದಾರೆ. ಆದ್ರೆ ತಲೆನೋವು ಕಡಿಮೆ ಮಾಡುತ್ತೆ ಅಂತಾ ಕಾಫಿ ಕುಡಿದ್ರೆ ಇದು ನಿಮ್ಮ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ.

ಹೋಳಿ ಸಂದರ್ಭದಲ್ಲಿ ಭಾಂಗ್ ಸೇವನೆಗೆ ಅವಕಾಶವಿದೆ. ಆದ್ರೆ ಇದ್ರ ಜೊತೆ ಊಟ-ಆಹಾರದ ಬಗ್ಗೆ ಗಮನ ನೀಡಬೇಕಾಗುತ್ತದೆ. ಹೊಟ್ಟೆ ಹಾಳು ಮಾಡುವಂತಹ ಆಹಾರವನ್ನೂ ಎಂದೂ ಭಾಂಗ್ ಸೇವನೆ ಮಾಡಿದ ನಂತ್ರ ತಿನ್ನಬೇಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...