alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರುಕಟ್ಟೆಗೆ ಲಗ್ಗೆಯಿಡಲಿದೆ ದ್ರವ ರೂಪದ ದಂತ ಸಂರಕ್ಷ

ಆಯುರ್ ದಂತಮ್ ಎಂಬ ದ್ರವ ರೂಪದ ದಂತ ಸಂರಕ್ಷಕವನ್ನು ಆವಿಷ್ಕಾರ ಮಾಡಲಾಗಿದೆ. ಇದು ವಿಶ್ವದ ಪ್ರಪ್ರಥಮ ದ್ರವರೂಪದ ದಂತಸಂರಕ್ಷಕ ಎಂದು ಸಂಶೋಧಕ ಡಾ.ಮಲ್ಲಿಕಾರ್ಜುನ ಡಂಬಳ ಹೇಳಿದ್ದಾರೆ.

ಅವರು ಶಿವಮೊಗ್ಗದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಇಂದು ನೂರಾರು ಟೂತ್ ಪೇಸ್ಟ್ ಗಳು ಮಾರುಕಟ್ಟೆಗೆ ಬಂದಿವೆ. ಇವುಗಳಲ್ಲಿ ಭಯಾನಕ ರಾಸಾಯನಿಕಗಳಿರುತ್ತವೆ. ಇವು ನಮ್ಮ ಆರೋಗ್ಯಕ್ಕೆ ಮಾರಕವಾಗಿರುತ್ತವೆ. ಆದ್ದರಿಂದ ಇದನ್ನು ತಡೆಯಲು ಒಂದು ನೂತನ ದಂತ ಸಂರಕ್ಷಣವನ್ನು ಕಂಡುಹಿಡಿಯಲಾಗಿದೆ. ಇದು ದ್ರವರೂಪದಲ್ಲಿದ್ದು ಕೇವಲ 5, 10 ಹನಿಗಳನ್ನು ಬಾಯಿಗೆ ಹಾಕಿಕೊಂಡು ನಾಲಿಗೆಯಿಂದ ಹಲ್ಲಿಗೆ ಸವರಿದರೆ ಸಾಕು ಕ್ಷಣದಲ್ಲಿಯೇ ಸೂಕ್ಷ್ಮಾಣುಗಳನ್ನು ಕೊಲ್ಲುತ್ತದೆ ಎಂದರು.

ಅಲ್ಲದೇ ಇತರೆ ಪೇಸ್ಟ್ ಗಳಿಗೆ ಹೋಲಿಸಿದರೆ ಬೆಲೆಯೂ ಕೂಡ ಕಡಿಮೆ ಇದೆ. ಹಲ್ಲು, ವಸಡು, ಬಾಯಿ, ನಾಲಿಕೆ ರುಚಿ ಗ್ರಂಥಿಗಳನ್ನು ಸ್ವಚ್ಚಗೊಳಿಸುತ್ತದೆ. ರಾಸಾಯನಿಕ ರಹಿತವಾಗಿರುವುದರಿಂದ ಆರೋಗ್ಯದ ಮೇಲೆ ಹಾನಿಯಾಗುವುದಿಲ್ಲ. ಈಗ ಬಹುತೇಕ ಆಯುರ್ವೇದ ಹಾಗೂ ಜನರಲ್ ಮೆಡಿಕಲ್ ಅಂಗಡಿಗಳಲ್ಲಿ ಸಿಗುತ್ತದೆ ಎಂದು ಹೇಳಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...