alex Certify
ಕನ್ನಡ ದುನಿಯಾ       Mobile App
       

Kannada Duniya

ನುಜ್ಜುಗುಜ್ಜಾಗಿದ್ದ ಮುಖ ಸರಿಮಾಡಲು ಪ್ಲೇಟ್, ಸ್ಕ್ರೂ ಬಳಕೆ….

ರಸ್ತೆ ಅಪಘಾತದಲ್ಲಿ ನುಜ್ಜುಗುಜ್ಜಾಗಿದ್ದ ಯುವಕನ ಮುಖವನ್ನು ದೆಹಲಿಯ ವೈದ್ಯರು 8 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ಬಳಿಕ ಮರುಜೋಡಣೆ ಮಾಡಿದ್ದಾರೆ. ಕಳೆದ ತಿಂಗಳು ನಡೆದ ಅಪಘಾತದಲ್ಲಿ 23 ವರ್ಷದ ವಿರಾಟ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದ.

ಆತನ ಮುಖ ಪೂರ್ತಿ ಅಪ್ಪಚ್ಚಿಯಾಗಿ ಹೋಗಿತ್ತು. ಮುಖದ ಮೂಳೆಗಳೆಲ್ಲ ಮುರಿದಿದ್ವು. ಆದ್ರೆ ಹೆಲ್ಮೆಟ್ ಧರಿಸಿದ್ದರಿಂದ ಬದುಕಿ ಉಳಿದಿದ್ದ. ಮುಖದಲ್ಲಿದ್ದ ಒಟ್ಟು 18 ಮೂಳೆಗಳ ಪೈಕಿ 13 ಮೂಳೆಗಳು ಮುರಿದು ಹೋಗಿದ್ದವು. ಎರಡೂ ದವಡೆಗಳಲ್ಲಿ ಫ್ರಾಕ್ಚರ್ ಆಗಿತ್ತು.

ಕಣ್ಣಿನ ಬಳಿಯಿದ್ದ ಮೂಳೆ ಹಾಗೂ ಮೂಗಿನ ಮೂಳೆ ಕೂಡ ತುಂಡಾಗಿತ್ತು. ಪ್ಲೇಟ್ ಹಾಗೂ ಸ್ಕ್ರೂಗಳ ಸಹಾಯದಿಂದ ವೈದ್ಯರು ಅವನ್ನೆಲ್ಲ ಮರುಜೋಡಣೆ ಮಾಡಿದ್ದಾರೆ. ಇದಕ್ಕಾಗಿ 8 ಪ್ಲೇಟ್ ಹಾಗೂ 30 ಸ್ಕ್ರೂಗಳನ್ನು ಬಳಸಲಾಗಿದೆ.

ಡಾ.ಗಂಭೀರ್ ನೇತೃತ್ವದ ನಾಲ್ವರು ವೈದ್ಯರ ತಂಡ ಈ ಕಠಿಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದೆ. ಇನ್ನೂ ದವಡೆಗಳ ಜೋಡಣೆ ಆಗಿಲ್ಲ. ವಿರಾಟ್ ಚೇತರಿಸಿಕೊಳ್ತಾ ಇದ್ದು, ದವಡೆಗಳ ಶಸ್ತ್ರಚಿಕಿತ್ಸೆ ಕೂಡ ಮುಗಿದ ಬಳಿಕ ಆಹಾರ ಸೇವಿಸಲು ಸಾಧ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...