alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ವಿಷಕಾರಿಯಾಗ್ತಿದೆ ತಾಯಿ ಎದೆ ಹಾಲು

ತಾಯಿ ಹಾಲು ಅಮೃತಕ್ಕೆ ಸಮಾನ ಎಂದು ಪರಿಗಣಿಸಲಾಗಿದೆ. ಆದ್ರೆ ಸಂಶೋಧನೆಯೊಂದು ಆಘಾತಕಾರಿ ವಿಷಯವನ್ನು ಹೊರ ಹಾಕಿದೆ. ತಾಯಿ ಎದೆ ಹಾಲಿನಲ್ಲೂ ರಾಸಾಯನಿಕವೊಂದು ಸೇರ್ಪಡೆಯಾಗುತ್ತಿದೆ. ಲೆಡ್ ಹೆಸರಿನ ರಾಸಾಯನಿಕ ಎದೆ ಹಾಲಿಗೆ ಸೇರುತ್ತಿದೆ. ಇದು ಮಕ್ಕಳ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀರಬಹುದೆಂದು ಸಂಶೋಧನೆ ಬಹಿರಂಗಪಡಿಸಿದೆ.

ಪರಿಸರ ಮಾಲಿನ್ಯ ತಾಯಿಯ ಎದೆ ಹಾಲಿನ ಮೇಲೆ ಪರಿಣಾಮ ಬೀರುತ್ತಿದೆ. ನವಜಾತ ಶಿಶುಗಳಿಗೆ ಅಮೃತ ಎನ್ನಲಾಗ್ತಿದ್ದ ಎದೆ ಹಾಲು ಈಗ ವಿಷವಾಗ್ತಿದೆ. ಪೆಟ್ರೋಲ್ ನಿಂದ ಹೊರಬರುವ ವಿಷಕಾರಿ ಹೊಗೆಯಲ್ಲಿಯೂ ಲೆಡ್ ರಾಸಾಯನಿಕ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾ ಇರುತ್ತದೆಯಂತೆ. ಈ ಲೆಡ್ ರಾಸಾಯನಿಕದಿಂದಾಗಿ ಗಂಭೀರವಾದ ರೋಗಗಳು ಮಕ್ಕಳನ್ನು ಆವರಿಸುವ ಸಾಧ್ಯತೆ ಇದೆ.

ಮಕ್ಕಳ ಗ್ರಹಣ ಶಕ್ತಿಯ ಮೇಲೆ ಪರಿಣಾಮ ಬೀರಬಹುದು. ಅವರ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು. ಮೂತ್ರಕೋಶ ಕಾಯಿಲೆ, ಹಲ್ಲುಗಳ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತವೆ. ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ವಾಯುಮಾಲಿನ್ಯ ಜಾಸ್ತಿ ಇರುವ ಜಾಗ, ಜನರೇಟರ್ ಬಳಸುವ ಪ್ರದೇಶ, ಸಾಮಾನ್ಯ ಬಣ್ಣ ಹಾಗೂ ಮನೆಗಳಲ್ಲಿ ಬಳಸುವ ಇನ್ವರ್ಟರ್ ನಿಂದಾಗಿ ರೋಗ ಹರಡುತ್ತದೆ. ಹೀಗಾಗಿ ತಾಯಂದಿರು ಜಾಗರೂಕತೆ ವಹಿಸುವುದು ಬಹು ಮುಖ್ಯ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...