alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಯುವಕನ ಹೊಟ್ಟೆಯಾಗಿತ್ತು ಕಸದ ಬುಟ್ಟಿ…!

ಮಧ್ಯಪ್ರದೇಶದ ಯುವಕನೊಬ್ಬ ತನ್ನ ಹೊಟ್ಟೆಯೇ ಕಸದ ಬುಟ್ಟಿ ಎಂದುಕೊಂಡು ಬಿಟ್ಟಿದ್ದ. ಅವನ ಹೊಟ್ಟೆಯಲ್ಲಿ ಉಗುರು, ಸೂಜಿ, ಕಬ್ಬಿಣದ ಸರಪಳಿ ಮತ್ತು ನಾಣ್ಯಗಳ ರಾಶಿಯೇ ಸಿಕ್ಕಿದೆ. ರೇವಾ ನಗರದ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಅದನ್ನೆಲ್ಲ ಹೊರತೆಗೆದಿದ್ದಾರೆ.

ಶೋಭಾಲಾಲ್ ಗ್ರಾಮದ ಈ ಯುವಕನ ಹೊಟ್ಟೆಯಲ್ಲಿ ಸುಮಾರು 1 ಕೆಜಿ ತೂಕದ ವಸ್ತುಗಳಿತ್ತು. ಸತತ ಮೂರು ಗಂಟೆಗಳ ಸರ್ಜರಿ ಬಳಿಕ ಅವನ್ನೆಲ್ಲ ಹೊರತೆಗೆಯಲಾಗಿದೆ. ಯುವಕನ ಹೊಟ್ಟೆಯಲ್ಲಿ 2 ರೂಪಾಯಿ, 5 ಮತ್ತು ಹತ್ತು ರೂಪಾಯಿಯ ಒಟ್ಟು 263 ನಾಣ್ಯಗಳಿದ್ದವು. ಈ ನಾಣ್ಯಗಳ ಒಟ್ಟು ಮೊತ್ತ 790 ರೂಪಾಯಿ.

ಇದರ ಜೊತೆಗೆ ಉಗುರುಗಳು, ದೊಡ್ಡ ದೊಡ್ಡ ಸೂಜಿ, ಕಬ್ಬಿಣದ ಸರಪಳಿಯ ತುಂಡುಗಳು ಕೂಡ ಸಿಕ್ಕಿವೆ. ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ಯುವಕ ಗಂಭೀರ ಸ್ಥಿತಿಯಲ್ಲಿದ್ದ. ಈಗ ಕೊಂಚ ಚೇತರಿಸಿಕೊಳ್ತಿದ್ದಾನೆ ಅಂತಾ ವೈದ್ಯರು ತಿಳಿಸಿದ್ದಾರೆ. ಸುಮಾರು 6 ತಿಂಗಳುಗಳ ಹಿಂದೆ ಇವನ್ನೆಲ್ಲ ನುಂಗಿರಬಹುದು ಅಂತಾ ಶಂಕಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...