alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರ್ಡಿಯಾಕ್ ಅರೆಸ್ಟ್ ಗೆ ಕಾರಣ ಮತ್ತು ಪರಿಹಾರ

cardiac

ಕಾರ್ಡಿಯಾಕ್ ಅರೆಸ್ಟ್ ಅಂದ್ರೆ ಹೃದಯಾಘಾತವಲ್ಲ, ಹೃದಯ ಸ್ತಂಭನ. ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಕಾರ್ಡಿಯಾಕ್ ಅರೆಸ್ಟ್ ನಿಂದಾಗಿಯೇ ನಿಧನರಾಗಿದ್ದಾರೆ. ಯಾವುದೇ ಸೂಚನೆಗಳಿಲ್ಲದೆ ಕಾರ್ಡಿಯಾಕ್ ಅರೆಸ್ಟ್ ಆಗಬಹುದು, ಹಾಗಾಗಿ ಅತ್ಯಂತ ಅಪಾಯಕಾರಿಯಾದ ಈ ಸ್ಥಿತಿ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು. ಆ ಸಂದರ್ಭವನ್ನು ಎದುರಿಸುವ ಬಗೆ ಗೊತ್ತಿರಬೇಕು.

ಹೃದಯ ನಿಮ್ಮ ದೇಹಕ್ಕೆ ರಕ್ತ ಪಂಪ್ ಮಾಡುವುದನ್ನು ನಿಲ್ಲಿಸಿದಾಗ ಹೃದಯ ಸ್ತಂಭನ ಸಂಭವಿಸುತ್ತದೆ. ಇದನ್ನು ಸಡನ್ ಕಾರ್ಡಿಯಾಕ್ ಅರೆಸ್ಟ್ ಅಂತಾನೂ ಕರೆಯಲಾಗುತ್ತದೆ. ಇದೊಂದು ವೈದ್ಯಕೀಯ ತುರ್ತು ಪರಿಸ್ಥಿತಿ. ರೋಗಿ ಪ್ರಜ್ಞೆ ಕಳೆದುಕೊಳ್ಳುತ್ತಾನೆ ಮತ್ತು ಉಸಿರಾಟ ನಿಂತುಹೋಗುತ್ತದೆ ಇಲ್ಲವೇ ಅಸಹಜವಾಗಿರುತ್ತದೆ. ಕೆಲವರಿಗೆ ಎದೆನೋವು, ಉಸಿರಾಟದ ತೊಂದರೆ ಮತ್ತು ವಾಕರಿಕೆ ಉಂಟಾಗಬಹುದು.

ಹಠಾತ್ ಹೃದಯ ಸ್ತಂಭನಕ್ಕೆ ಕಾರಣವೇನು?

ದಿಢೀರನೆ ಕಾರ್ಡಿಯಾಕ್ ಅರೆಸ್ಟ್  ಸಂಭವಿಸುವುದಕ್ಕೆ ಕಾರಣ ಹೃದಯ ಲಯಬದ್ಧವಾಗಿ ಉಸಿರಾಡದೇ ಇರುವುದು, ಅದನ್ನು ಸ್ತಂಭನ ಎಂದು ಕರೆಯಲಾಗುತ್ತದೆ. ಉಳಿದಂತೆ ಪರಿಧಮನಿ ಕಾಯಿಲೆ, ಹೃದಯಾಘಾತ, ದೈಹಿಕ ಒತ್ತಡ, ತೀವ್ರ ರಕ್ತಸ್ರಾವ, ಆಮ್ಲಜನಕದ ಕೊರತೆ, ತೀವ್ರ ದೈಹಿಕ ವ್ಯಾಯಾಮ ಮತ್ತು ಕೆಲವು ಆನುವಂಶಿಕ ಅಸ್ವಸ್ಥತೆಗಳು ಕೂಡ ಹೃದಯ ಸ್ತಂಭನಕ್ಕೆ ಕಾರಣವಾಗುತ್ತವೆ. ಕೆಲವೊಮ್ಮೆ ಹಠಾತ್ ಹೃದಯ ಸ್ತಂಭನಕ್ಕೆ ಕಾರಣಗಳೇ ಅರಿವಿಗೆ ಬರುವುದಿಲ್ಲ. ಧೂಮಪಾನ, ಬೊಜ್ಜು, ಅಧಿಕ ರಕ್ತದೊತ್ತಡ, ರಕ್ತದಲ್ಲಿ ಅಧಿಕ ಕೊಲೆಸ್ಟ್ರಾಲ್, ಮಧುಮೇಹ, ಮದ್ಯಪಾನ ಮತ್ತು ಜಡವಾದ ಜೀವನಶೈಲಿ ಕಾರ್ಡಿಯಾಕ್ ಅರೆಸ್ಟ್ ಗೆ ಪ್ರಮುಖ ಕಾರಣ.

ಹಠಾತ್ ಹೃದಯ ಸ್ತಂಭನ ತಡೆಯಬಹುದೇ?

ಕಾರ್ಡಿಯಾಕ್ ಅರೆಸ್ಟ್ ಸಂಭವಿಸದಂತೆ ಎಚ್ಚರಿಕೆ ವಹಿಸುವುದು ಉತ್ತಮ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಹೃದಯ ಸಮಸ್ಯೆ ಇದ್ದಲ್ಲಿ ಒಮ್ಮೆ ಪರೀಕ್ಷಿಸಿಕೊಳ್ಳಿ. ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಿ. ಪೋಷಕಾಂಶವುಳ್ಳ ಆಹಾರ ಸೇವಿಸಿ, ಸಮತೋಲನದ ಡಯಟ್ ಮಾಡಿ, ದೈಹಿಕವಾಗಿ ಚಟುವಟಿಕೆಯಿಂದಿರಿ. ದೇಹದ  ತೂಕವನ್ನು ನಿಯಂತ್ರಿಸಿಕೊಳ್ಳಿ. ಧೂಮಪಾನ ಮಾಡಬೇಡಿ.

ಹಠಾತ್ ಹೃದಯ ಸ್ತಂಭನ ಸಂಭವಿಸಿದರೆ ಏನು ಮಾಡಬೇಕು?

ಹೃದಯ ಸ್ತಂಭನ ಉಂಟಾದಾಗ ಹೃದಯ ಮತ್ತು ಶ್ವಾಸಕೋಶ ಪ್ರಚೋದಕ (ಸಿಪಿಆರ್) ಅಥವಾ ಡಿಫೈಬ್ರಿಲೇಟರ್ ಅಳವಡಿಸಬೇಕು, ಇಲ್ಲವಾದಲ್ಲಿ ವ್ಯಕ್ತಿ ಕೆಲವೇ ನಿಮಿಷಗಳಲ್ಲಿ ಸಾಯುತ್ತಾನೆ. ಕೂಡಲೇ ಸಿಪಿಆರ್ ಅಳವಡಿಸಿದಲ್ಲಿ ಅದು ಮೆದುಳು ಮತ್ತು ಇತರ ಭಾಗಗಳಿಗೆ ಆಮ್ಲಜನಕಯುಕ್ತ ರಕ್ತವನ್ನು ಹರಿಸುತ್ತದೆ. ನಿಮ್ಮ ಬಳಿ ಸಿಪಿಆರ್ ಇಲ್ಲದಿದ್ದಲ್ಲಿ ಕೂಡಲೇ ತುರ್ತು ವೈದ್ಯಕೀಯ ನೆರವಿಗಾಗಿ ಕರೆ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...