alex Certify
ಕನ್ನಡ ದುನಿಯಾ       Mobile App
       

Kannada Duniya

ಆಸಿಡ್ ದಾಳಿ ಸಂತ್ರಸ್ಥರಿಗಾಗಿ 40 ಲಕ್ಷ ಖರ್ಚು ಮಾಡ್ತಿದ್ದಾರೆ ಈ ವೈದ್ಯ

doctor

ಬ್ರಿಟನ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಪಾಕಿಸ್ತಾನ ಮೂಲದ ತಜ್ಞ ವೈದ್ಯರೊಬ್ಬರು ಆ್ಯಸಿಡ್ ದಾಳಿ ಸಂತ್ರಸ್ಥರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಉಚಿತವಾಗಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದಕ್ಕಾಗಿ ಡಾಕ್ಟರ್ ಆಸೀಂ ಶಾಹ್ಮಾಲಕ್ 40 ಲಕ್ಷ ರೂಪಾಯಿ ಖರ್ಚು ಮಾಡ್ತಿದ್ದಾರೆ.

ಈಗಾಗ್ಲೇ ಪಾಕಿಸ್ತಾನದ 6 ಮಂದಿ ಆ್ಯಸಿಡ್ ದಾಳಿ ಸಂತ್ರಸ್ಥರಿಗೆ ಡಾ.ಆಸೀಂ ಚಿಕಿತ್ಸೆ ಕೊಡಲು ಆರಂಭಿಸಿದ್ದಾರೆ. ಆ್ಯಸಿಡ್ ದಾಳಿಯಿಂದ ಅದೆಷ್ಟೋ ಮಹಿಳೆಯರ ಬದುಕು ನರಕವಾಗಿದೆ. ಕೆಲವರನ್ನು ಪತಿ ತಿರಸ್ಕರಿಸಿದ್ರೆ, ಇನ್ನು ಕೆಲವರಿಗೆ ಮದುವೆ ಭಾಗ್ಯವೇ ಇಲ್ಲ.

ಇನ್ನೊಂದಷ್ಟು ಮಂದಿಯನ್ನು ಮಕ್ಕಳೇ ಮನೆಯಿಂದ ಹೊರದಬ್ಬುತ್ತಾರೆ. ಹೀಗೆ ಸಮಾಜದಿಂದ ತಿರಸ್ಕರಿಸಲ್ಪಟ್ಟು, ಜೀವನದ ದಾರಿ ಹುಡುಕಿ ಹೊರಟ ಸಂತ್ರಸ್ಥರಿಗೆ ಡಾ.ಆಸೀಂ ಸಹಾಯ ಹಸ್ತ ಚಾಚಿದ್ದಾರೆ. ಡಾ. ಆಸೀಂ ಬ್ರಿಟನ್ ನ ಪ್ರಖ್ಯಾತ ವೈದ್ಯರಲ್ಲೊಬ್ರು, ಸೆಲೆಬ್ರಿಟಿಗಳಿಗೆ ಚಿಕಿತ್ಸೆ ನೀಡಿದ ಹೆಗ್ಗಳಿಕೆ ಅವರದ್ದು.

ಆದ್ರೆ ಈಗ ಚಿಕಿತ್ಸೆಗೂ ಹಣವಿಲ್ಲದೆ ಕಂಗಾಲಾಗಿರುವವರಿಗೆ ಆಸರೆಯಾಗ್ತಿದ್ದಾರೆ. ಇನ್ನೊಂದಷ್ಟು ವೈದ್ಯರಿಗೂ ಶಸ್ತ್ರಚಿಕಿತ್ಸೆಯ ತರಬೇತಿ ನೀಡುತ್ತಿದ್ದಾರೆ. ಈ ಮೂಲಕ ಪಾಕಿಸ್ತಾನದ ಆ್ಯಸಿಡ್ ಸಂತ್ರಸ್ಥರಿಗೆಲ್ಲ ಹೊಸ ಬದುಕು ನೀಡುವುದು ಡಾ.ಆಸೀಂ ಅವರ ಉದ್ದೇಶ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...