alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳಲ್ಲಿ ಹೆಚ್ಚಾಗ್ತಿದೆ ಬ್ಲಡ್ ಕ್ಯಾನ್ಸರ್: ಆರಂಭದಲ್ಲೇ ಎಚ್ಚೆತ್ತುಕೊಳ್ಳಿ

ಕೆಟ್ಟ ಆಹಾರ ಹಾಗೂ ಅನಿಯಮಿತ ಜೀವನ ಶೈಲಿ ದಿನಕ್ಕೊಂದು ರೋಗಕ್ಕೆ ನಾಂದಿ ಹಾಡ್ತಿದೆ. ಹೊಸ ಹೊಸ ಖಾಯಿಲೆ ಜೊತೆ ಕಾನ್ಸರ್ ವಿಶ್ವದಾದ್ಯಂತ ವೇಗವಾಗಿ ಹರಡುತ್ತಿದೆ. ಈ ರೋಗ ಸಣ್ಣ ಮುಗ್ದ ಮಕ್ಕಳನ್ನೂ ಬಿಟ್ಟಿಲ್ಲ. ಭಾರತದಲ್ಲಿ ಕ್ಯಾನ್ಸರ್ ರೋಗಿಗಳ ಪೈಕಿ ಶೇಕಡಾ 5 ರಷ್ಟು ರೋಗಿಗಳು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದಾರೆ.

ಮಕ್ಕಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬ್ಲಡ್ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಇದನ್ನು ಪತ್ತೆ ಹಚ್ಚುವುದು ಸುಲಭವಲ್ಲ. ಕ್ಯಾನ್ಸರ್ ಕೊನೆ ಹಂತ ತಲುಪಿದ ಮೇಲೆ ಗೊತ್ತಾಗುವ ಸಾಧ್ಯತೆ ಹೆಚ್ಚು. ಪರಿಸರದಲ್ಲಿರುವ ವಿಕಿರಣ ಹಾಗೂ ವೈರಲ್ ಸೋಂಕಿನಿಂದಾಗಿ ಇದು ಕಾಣಿಸಿಕೊಳ್ಳುತ್ತದೆ. ಮನೆಯಲ್ಲಿ ತಂದೆ-ತಾಯಿಯಲ್ಲಿ ಒಬ್ಬರಿಗೆ ಬ್ಲಡ್ ಕ್ಯಾನ್ಸರ್ ಇದ್ರೂ ಅದು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಲ್ಯುಕೇಮಿಯಾ ಒಂದು ರೀತಿಯ ಬ್ಲಡ್ ಕ್ಯಾನ್ಸರ್ ಆರಂಭ. ಮೊದಲೇ ಇದ್ರ ಬಗ್ಗೆ ತಿಳಿದ್ರೆ ಕ್ಯಾನ್ಸರ್ ಗುಣಪಡಿಸುವುದು ಸುಲಭ. ಲ್ಯುಕೇಮಿಯಾ ಸೆಲ್ಸ್ ನೇರವಾಗಿ ಬ್ಲಡ್ ಮೇಲೆ ಪ್ರಭಾವ ಬೀರುತ್ತವೆ. ಲ್ಯುಕೇಮಿಯಾ ಲಕ್ಷಣ ಪತ್ತೆ ಹೆಚ್ಚುವುದು ಸುಲಭ. ನಿರ್ಲಕ್ಷ್ಯ ಮಾಡಿದ್ರೆ ಅಪಾಯ ನಿಶ್ಚಿತ.

ಬ್ಲಡ್ ಕ್ಯಾನ್ಸರ್ ಆರಂಭದಲ್ಲಿ ಪದೇ ಪದೇ ಜ್ವರ ಅಥವಾ ಒಂದೇ ರೀತಿಯ ಸೋಂಕು ಕಾಣಿಸಿಕೊಳ್ಳುತ್ತದೆ.

ಮಕ್ಕಳು ಪ್ರತಿ ಕ್ಷಣ ದಣಿವು, ಸುಸ್ತು ಎನ್ನುತ್ತಾರೆ. ರಕ್ತಹೀನತೆ ಕೂಡ ಈ ರೋಗದ ಲಕ್ಷಣವಾಗಿದೆ.

ಮಗುವಿನ ಮೂಗು ಅಥವಾ ದವಡೆಯಿಂದ ರಕ್ತ ಬರುತ್ತದೆ. ಪ್ಲೇಟ್ಲೆಟ್ ಕಡಿಮೆಯಾಗುತ್ತದೆ.

ದೇಹದ ವಿವಿಧ ಭಾಗಗಳಲ್ಲಿ ಗಡ್ಡೆ ಹಾಗೂ ನೋವು ಕಾಣಿಸಿಕೊಳ್ಳುತ್ತದೆ.

ಮಕ್ಕಳಲ್ಲಿ ಲಿವರ್ ಗೆ ಸಂಬಂಧಿಸಿದ ಸಮಸ್ಯೆ ಕಾಡುತ್ತದೆ. ಸ್ಟ್ರೋಕ್ ಕೂಡ ಇದ್ರ ಲಕ್ಷಣ.

ಚರ್ಮ ಕೊಳೆಯುವುದು ಹಾಗೂ ವಾಂತಿ.

ಅಚಾನಕ್ ಮಕ್ಕಳ ತೂಕ ಇಳಿಯುವುದು. ಯಾವುದೇ ಗಾಯ ಬೇಗ ಗುಣವಾಗದೆ ಇರುವುದು ಈ ರೋಗದ ಲಕ್ಷಣವಾಗಿದೆ.

ಇಡೀ ದೇಹವನ್ನು ಕ್ಯಾನ್ಸರ್ ಆವರಿಸಿ ಮಕ್ಕಳನ್ನು ಬಲಿಕೊಡುವ ಬದಲು ಆರಂಭದಲ್ಲಿಯೇ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಸೂಕ್ತ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...