alex Certify ಗ್ರೀನ್ ಟೀ ಸೇವನೆ ಮೊದಲು ಇದು ತಿಳಿದಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರೀನ್ ಟೀ ಸೇವನೆ ಮೊದಲು ಇದು ತಿಳಿದಿರಲಿ

ಆಯುರ್ವೇದ ಗುಣ ಲಕ್ಷಣಗಳಿಂದ ಸಮೃದ್ಧವಾಗಿರುವ ಗ್ರೀನ್ ಟೀ ಸೇವನೆ  ಆರೋಗ್ಯಕ್ಕೆ ಬಹಳ  ಒಳ್ಳೆಯದು. ಗ್ರೀನ್ ಟೀ ಯಲ್ಲಿ ವಿವಿಧ ಖನಿಜಗಳು, ವಿಟಮನ್ ಗಳು ಸಮೃದ್ಧವಾಗಿದ್ದು ಪ್ರಬಲ ಆಂಟಿ ಆಕ್ಸಿಡೆಂಟ್ ಗುಣಗಳನ್ನೂ ಹೊಂದಿದೆ. ಇದರ ಸೇವನೆಯಿಂದ ಹೃದಯ ರೋಗ ಸೇರಿದಂತೆ ಅನೇಕ ರೋಗಗಳಿಗೆ ಪರಿಹಾರ ನೀಡುತ್ತದೆ. ಗ್ರೀನ್ ಟೀ ಪೂರ್ಣ ಲಾಭ ಪಡೆಯಲು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಪ್ರಮಾಣದಲ್ಲಿ ಕುಡಿಯುವುದು ಬಹಳ ಮುಖ್ಯ.

ಹಸಿರು ಟೀ ಯಾವಾಗಲೂ ಫ್ರೆಶ್ ಇರುವಾಗ ಕುಡಿಯಬೇಕು. ಮಾಡಿಟ್ಟು 20-25 ನಿಮಿಷಗಳ ನಂತರ ಸೇವಿಸಬೇಡಿ. ಹಸಿರು ಚಹಾ ಬಹಳ ಸಮಯ ಹಾಗೇ ಇಡುವುದರಿಂದ ಅವುಗಳಲ್ಲಿ ಇರುವ ಜೀವಸತ್ವ ಮತ್ತು ಆ್ಯಂಟಿ ಆಕ್ಸಿಡೆಂಟ್ ಕಳೆದುಕೊಳ್ಳುತ್ತವೆ. ಇದರಿಂದಾಗಿ ಸಂಪೂರ್ಣ ಪ್ರಯೋಜನ ಸಿಗುವುದಿಲ್ಲ. ಹಾಗಾಗಿ ಯಾವಾಗಲೂ ತಾಜಾ ಹಸಿರು ಚಹಾವನ್ನು ಕುಡಿಯಿರಿ.

ಮಧ್ಯಾಹ್ನದ ಊಟದ ನಂತ್ರ ಅರ್ಧ ಗಂಟೆ ಬಿಟ್ಟು ಗ್ರೀನ್ ಟೀ ಕುಡಿಯಿರಿ.  ದೇಹದ ತೂಕ ಇಳಿಸಿಕೊಳ್ಳಲು ಬಯಸುವವರು ಊಟಕ್ಕಿಂತ  ಒಂದುವರೆ ಗಂಟೆ ಮುಂಚೆ ಕುಡಿಯಿರಿ.  ಏಕೆಂದರೆ ಅದು ಹಸಿವು ನಿಯಂತ್ರಿಸುತ್ತದೆ ಮತ್ತು ತೂಕವನ್ನು ಹೆಚ್ಚಿಸುವುದಿಲ್ಲ. ಬೆಳಿಗ್ಗೆ ಇದನ್ನು ಕುಡಿಯಬೇಡಿ. ಇದು ಮಲಬದ್ಧತೆ ಮತ್ತು ಆಮ್ಲೀಯತೆಯನ್ನು ಉಂಟುಮಾಡಬಹುದು.

ದಿನದಲ್ಲಿ ಕೇವಲ 2-3 ಕಪ್ ಹಸಿರು ಚಹಾ ಸೇವಿಸಬೇಕು. ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ಗಳು ಮತ್ತು ಫ್ಲೇವೊನೈಡ್ಗಳು ಯಕೃತ್ತಿನ ಮೇಲೆ  ಪರಿಣಾಮ ಬೀರುತ್ತದೆ.

ಗ್ರೀನ್ ಟೀಗೆ  ಹಾಲು ಅಥವಾ ಸಕ್ಕರೆ ಹಾಕಿ ಕುಡಿಯಬಾರದು. ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.

ಗ್ರೀನ್ ಟೀ ಜೊತೆ ಜೇನುತುಪ್ಪ ಹಾಕಿ ಕುಡಿಯಬಹುದು. ಇದು ಕೊಬ್ಬನ್ನು ಕರಗಿಸುತ್ತದೆ. ಜೊತೆಗೆ ಕ್ಯಾಲೋರಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಂದಿಗೂ ಗ್ರೀನ್ ಟೀಯನ್ನು  ಔಷಧಿಗಳೊಂದಿಗೆ ಸೇವಿಸಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...