alex Certify
ಕನ್ನಡ ದುನಿಯಾ       Mobile App
       

Kannada Duniya

ಖಿನ್ನತೆ, ಚಿಂತೆಯನ್ನು ದೂರ ಮಾಡುತ್ತೆ ವಾಕಿಂಗ್….

walking_625x350_51447922251

ನಡಿಗೆ ನಿಮ್ಮ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ವಾಕಿಂಗ್ ನಿಮ್ಮನ್ನು ಖುಷಿಯಾಗಿಡುತ್ತೆ. ಯಾರು ನಡೆದಾಡಿಕೊಂಡು, ಓಡಾಡಿಕೊಂಡಿರ್ತಾರೋ ಅವರು ಖುಷಿಯಾಗಿರ್ತಾರೆ ಅನ್ನೋದು ಸಂಶೋಧನೆಯಲ್ಲೇ ದೃಢಪಟ್ಟಿದೆ. ದಿನವಿಡೀ ಚಟುವಟಿಕೆಯಿಂದ ಓಡಾಡಿಕೊಂಡಿರುವವರು ಕುಳಿತು ಕೆಲಸ ಮಾಡುವವರಿಗಿಂತ ಹೆಚ್ಚು ಸಂತೋಷವಾಗಿರುತ್ತಾರೆ.

ಒಂದೇ ಬಾರಿ ಕಿಲೋಮೀಟರ್ ಗಟ್ಟಲೆ ದೂರ ನಡೆಯಬೇಕೆಂದೇನಿಲ್ಲ. ಅಲ್ಲಲ್ಲಿ ನಿಂತು ನಿಂತು ನಡೆಯಬಹುದು. ಆದ್ರೆ ವಾಕಿಂಗ್ ಮಾಡೋದ್ರಿಂದ ಎಲ್ಲಾ ಬೇಸರ, ಚಿಂತೆ ದೂರವಾಗುತ್ತದೆ. ಈ ಸಂಶೋಧನೆಯಲ್ಲಿ ಆ್ಯಪ್ ಒಂದನ್ನು ಅಳವಡಿಸಿ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಯಾರು ಪ್ರತಿನಿತ್ಯ ಎಷ್ಟು ನಡೆದಾಡ್ತಾರೆ? ಎಷ್ಟು ಖುಷಿಯಾಗಿರ್ತಾರೆ ಅನ್ನೋದನ್ನು ಆ್ಯಪ್ ಮೂಲಕ ತಿಳಿಯಬಹುದು. 17 ದಿನಗಳಲ್ಲಿ ಈ ಆ್ಯಪ್ ಅಳವಡಿಸಿ ಸುಮಾರು 10,000 ಜನರ ಚಟುವಟಿಕೆಗಳನ್ನು ಅಧ್ಯಯನ ಮಾಡಲಾಗಿದೆ. 17 ದಿನಗಳಲ್ಲಿ ಯಾರು ಹೆಚ್ಚು ನಡೆದಾಡಿದ್ದಾರೋ ಅವರು ಹೆಚ್ಚು ಸಂತೋಷವಾಗಿರೋದು ಆ್ಯಪ್ ನಲ್ಲಿ ದೃಢಪಟ್ಟಿದೆ.

ಶಾರೀರಿಕವಾಗಿ ನೀವು ಆ್ಯಕ್ಟಿವ್ ಆಗಿದ್ದಷ್ಟು ಮಾನಸಿಕವಾಗಿಯೂ ಆನಂದವಾಗಿ ಇರುತ್ತೀರಾ. ಯಾರು ಕಡಿಮೆ ನಡೆದಿದ್ದಾರೋ ಅವರು ಅಸಂತುಷ್ಟರಾಗಿ ಕಂಡುಬಂದಿದ್ದಾರೆ. ಶಾರೀರಿಕವಾಗಿ ಚಟುವಟಿಕೆಯಿಂದಿರುವವರು ಧನಾತ್ಮಕವಾಗಿ ಆಲೋಚಿಸುತ್ತಾರೆ. ಅವರಿಗೆ ಚಿಂತೆ ಮತ್ತು ಖಿನ್ನತೆ ಹೆಚ್ಚಾಗಿ ಕಾಡುವುದಿಲ್ಲ. ಹಾಗಾಗಿ ಖುಷಿಯಾಗಿರಬೇಕು ಅಂದ್ರೆ ನೀವು ಕೂಡ ಓಡಾಡುತ್ತಿರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...