alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಸ್ಲಿ ಎಂದರೇನು..?

parsley 3334

ಹೊಟ್ಟೆ ಬೊಜ್ಜು ಕರಗಿಸೋದ್ರಲ್ಲಿ ಪಾರ್ಸ್ಲಿ ಪರಿಣಾಮಕಾರಿ ಅಂತಾ ನಾವು ತಿಳಿಸಿದ್ವಿ. ಪಾರ್ಸ್ಲಿ ಅಂದ್ರೆ ಏನು ? ಎಂಬ ಪ್ರಶ್ನೆ ಕೆಲ ಓದುಗರಲ್ಲಿ ಹುಟ್ಟಿಕೊಂಡಿದೆ. ಪಾರ್ಸ್ಲಿ ಬಗ್ಗೆ ಒಂದು ಚಿಕ್ಕ ಮಾಹಿತಿ ನಿಮ್ಮ ಮುಂದೆ.

ಪಾರ್ಸ್ಲಿ ಒಂದು ಅದ್ಬುತ ಸುಗಂಧ ಸಸ್ಯ. ಸಾಮಾನ್ಯವಾಗಿ ಮಸಾಲೆಯಾಗಿ ಅದನ್ನು ಬಳಸ್ತಾರೆ. ಕೊತ್ತಂಬರಿ ಸೊಪ್ಪಿನ ರೀತಿಯಲ್ಲಿಯೇ ಅದನ್ನು ಉಪಯೋಗಿಸ್ತಾರೆ. ಯುರೋಪ್ ಹಾಗೂ ಅಮೆರಿಕಾ ದೇಶಗಳಲ್ಲಿ ಇದರ ಬಳಕೆ ಜಾಸ್ತಿ. ಇದರಲ್ಲಿ ಎರಡು ವಿಧ. ಒಂದು ಸೊಪ್ಪಾದ್ರೆ ಇನ್ನೊಂದು ಗಡ್ಡೆ. ಗಡ್ಡೆ ಕ್ಯಾರೆಟ್ ಹೋಲುತ್ತದೆ. ಆದರೆ ಅದರ ರುಚಿ ಭಿನ್ನವಾಗಿರುತ್ತದೆ. ಇದನ್ನು ಬೆಳೆಯುವುದು ಸ್ವಲ್ಪ ಕಷ್ಟ.

ಮಧ್ಯ ಮತ್ತು ಪೂರ್ವ ಯುರೋಪ್ ಮತ್ತು ಪಶ್ಚಿಮ ಏಷ್ಯಾದಲ್ಲಿ ಭಕ್ಷ್ಯಗಳ ಮೇಲೆ ಹಸಿಯಾಗಿರುವ ಇದನ್ನು ಕತ್ತರಿಸಿ ಉದುರಿಸುತ್ತಾರೆ. ಫ್ರೆಂಚ್ ಫ್ರೈ ಸೇರಿದಂತೆ ಆಲೂಗಡ್ಡೆ ಭಕ್ಷ್ಯ, ಅಕ್ಕಿ ಆಹಾರವಾದ ರಿಸೊಟ್ಟೊ, ಮೀನು, ಫ್ರೈಡ್ ಚಿಕನ್, ಕುರಿ ಆಹಾರಗಳ ಸುವಾಸನೆ ಹೆಚ್ಚಿಸಲು ಇದನ್ನು ಬಳಸುತ್ತಾರೆ. ಸಲಾಡ್ ರೂಪದಲ್ಲೂ ಇದನ್ನು ಸೇವಿಸಲಾಗುತ್ತದೆ.

ಚಹಾ ರೂಪದಲ್ಲೂ ಇದನ್ನು ಬಳಸುತ್ತಾರೆ. ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಇದು ಪ್ರಯೋಜನಕಾರಿಯಾಗಿದ್ದು, ಚೀನಾ ಹಾಗೂ ಜರ್ಮನಿಯಲ್ಲಿ ಪಾರ್ಸ್ಲಿ ಚಹಾ ಪ್ರಸಿದ್ಧಿ ಪಡೆದಿದೆ. ಮೂತ್ರಕೋಶ ಬಲಪಡಿಸಲು, ಜೀರ್ಣಕ್ರಿಯೆಗೆ ಇದು ಸಹಕಾರಿ. ಕ್ಯಾನ್ಸರ್ ಗೆ ಇದು ಔಷಧಿ ಎಂದು ನಂಬಲಾಗಿದೆ. ಹಸಿ ಸೊಪ್ಪನ್ನು ಉಜ್ಜಿದರೆ ತುರಿಕೆ ಕಡಿಮೆಯಾಗುತ್ತದೆ. ಪಾರ್ಸ್ಲಿ ಬಾಯಿಯಿಂದ ಬರುವ ಕೆಟ್ಟ ವಾಸನೆಯನ್ನು ತಡೆಗಟ್ಟುತ್ತದೆ. ಗರ್ಭಿಣಿಯರು ತೈಲ, ಎಲೆ ಅಥವಾ ಪಾರ್ಸ್ಲಿ ಬೀಜಗಳನ್ನು ಬಳಸಬಾರದು. ಗರ್ಭಪಾತ ಅಥವಾ ಅವಧಿಗಿಂತ ಮೊದಲು ಪ್ರಸವವಾಗುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...