alex Certify ನಿಮ್ಮಿಷ್ಟದ ಟೀಗೆ ಒಂದು ಚಮಚ ತುಪ್ಪ ಬೆರೆಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮಿಷ್ಟದ ಟೀಗೆ ಒಂದು ಚಮಚ ತುಪ್ಪ ಬೆರೆಸಿ

Tibetan Butter Tea: Know Why This Tea Is Different

ತುಪ್ಪ ಅದ್ರಲ್ಲೂ ದೇಸಿ ತುಪ್ಪ ಆರೋಗ್ಯಕ್ಕೆ ಒಳ್ಳೆಯದು ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ತುಪ್ಪ ಸೇವನೆಯಿಂದ ಅನೇಕ ರೋಗಗಳು ದೂರವಾಗುತ್ತವೆ. ತುಪ್ಪದಲ್ಲಿ ಅನೇಕ ಪೋಷಕಾಂಶಗಳಿವೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ತುಪ್ಪ ಸೇವನೆ ಮಾಡ್ಬಹುದು.

ನೀವು ತುಪ್ಪವನ್ನು ಚಪಾತಿ, ದೋಸೆ ಅಥವಾ ಕೆಲ ಸ್ವೀಟ್‌ ಜೊತೆ ಸೇವನೆ ಮಾಡ್ತೀರಿ. ಇನ್ನು ಕೆಲವರು ಅನ್ನಕ್ಕೆ ತುಪ್ಪ ಹಾಕಿಕೊಂಡು ತಿನ್ನುತ್ತಾರೆ. ಆಹಾರವನ್ನು ಫ್ರೈ ಮಾಡಲು ತುಪ್ಪ ಬಳಸುವವರಿದ್ದಾರೆ. ಆದ್ರೆ ಅನೇಕರಿಗೆ ಚಹಾಕ್ಕೆ ತುಪ್ಪ ಬೆರೆಸಿ ಕುಡಿಯಬೇಕು ಎಂಬ ಸಂಗತಿ ತಿಳಿದಿಲ್ಲ. ಟೀಗೆ ಒಂದು ಚಮಚ ದೇಸಿ ತುಪ್ಪವನ್ನು ಸೇರಿಸಿ ಸೇವಿಸಿದ್ರೆ ಲಾಭ ಹೆಚ್ಚಿದೆ.

ಟೀ ಜೊತೆ ದೇಸಿ ತುಪ್ಪ ಸೇವನೆಯಿಂದ ಲಾಭ :

  • ಮುಟ್ಟಿನ ಸಮಯದಲ್ಲಿ ಅಸಹನೀಯ ನೋವನ್ನು ಮಹಿಳೆಯರು ಅನುಭವಿಸುತ್ತಾರೆ. ಆಗ ಚಹಾಕ್ಕೆ ತುಪ್ಪ ಸೇರಿಸಿ ಕುಡಿಯಬೇಕು. ಹೀಗೆ ಮಾಡಿದ್ರೆ ಹೊಟ್ಟೆ ನೋವು ಅಥವಾ ಸೆಳೆತ ಕಡಿಮೆ ಆಗುತ್ತದೆ.
  • ನೀವು ಟೀ ಜೊತೆ ದೇಸಿ ತುಪ್ಪ ಬೆರೆಸಿ ಸೇವನೆ ಮಾಡಿದ್ರೆ ಇದು ನಿಮ್ಮ ಮೆದುಳಿನ ಆರೋಗ್ಯ ಸುಧಾರಿಸುತ್ತದೆ. ಹಾರ್ಮೋನ್ ಸಮಸ್ಯೆ ಕಾಡೋದಿಲ್ಲ. ಹಾರ್ಮೋನ್‌ ಸರಿಯಾಗಿ ಕೆಲಸ ಮಾಡೋದ್ರಿಂದ ಮೂಡ್ ಸ್ವಿಂಗ್ ನಂತಹ ಸಮಸ್ಯೆಗಳು ಬರುವುದಿಲ್ಲ.
  • ತುಪ್ಪ ಬೆರೆಸಿದ ಚಹಾ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ದೇಸಿ ತುಪ್ಪವನ್ನು ಚಹಾದೊಂದಿಗೆ ಬೆರೆಸಿ ಕುಡಿದರೆ ಹೃದಯ ಬಲಗೊಳ್ಳುತ್ತದೆ. ದೇಸಿ ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬುಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಬಹಳ ಸಹಾಯಕವಾಗಿದೆ. ನಿಮಗೆ ಪಾರ್ಶ್ವವಾಯು ಕಾಡೋದಿಲ್ಲ.
  • ರೋಗನಿರೋಧಕ ಶಕ್ತಿ ಹೆಚ್ಚಾಗಬೇಕು ಎನ್ನುವವರು ದೇಸಿ ತುಪ್ಪವನ್ನು ಟೀಗೆ ಹಾಕಿ ಕುಡಿಯಬೇಕು. ಶೀತ, ಕೆಮ್ಮು, ಜ್ವರಕ್ಕೂ ಪರಿಹಾರ ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...