alex Certify
ಕನ್ನಡ ದುನಿಯಾ       Mobile App
       

Kannada Duniya

ಬೇಸಿಗೆಯಲ್ಲಿ ಕರ್ಬೂಜ ತಿಂದು ಅನಾರೋಗಕ್ಕೆ ಹೇಳಿ ಗುಡ್ ಬೈ

ಕರ್ಬೂಜದಲ್ಲಿ ಶೇಕಡಾ 95ರಷ್ಟು ನೀರಿನಂಶವಿರುತ್ತದೆ. ಇದೇ ಕಾರಣಕ್ಕೆ ಬೇಸಿಗೆಯಲ್ಲಿ ಇದನ್ನು ಹೆಚ್ಚಾಗಿ ತಿನ್ನಲು ಜನರು ಇಷ್ಟಪಡ್ತಾರೆ. ನೀರಿನ ಜೊತೆ ಪ್ರೋಟೀನ್, ಕಾರ್ಬೋಹೈಡ್ರೇಟ್, ಕಬ್ಬಿಣ, ವಿಟಮಿನ್ ಎ, ಬಿ, ಸಿ ಅಂಶ ಇದ್ರಲ್ಲಿ ಹೆಚ್ಚಿರುತ್ತದೆ.

ಬೇಸಿಗೆಯಲ್ಲಿ ಕರ್ಬೂಜ ಸೇವನೆ ಮಾಡುವುದ್ರಿಂದ ಸಾಕಷ್ಟು ಲಾಭವಿದೆ. ಇದು ದೇಹವನ್ನು ತಂಪಾಗಿರಿಸುವ ಜೊತೆಗೆ ಹೃದಯದ ಉರಿ, ಮೂತ್ರಪಿಂಡದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ತೂಕ ಇಳಿಕೆಗೂ ಇದು ಪ್ರಯೋಜನಕಾರಿ. ಕರ್ಬೂಜ ಸೇವನೆ ಮಾಡುವುದ್ರಿಂದ ಕ್ಯಾನ್ಸರ್ ದೂರವಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಹತ್ತಿರ ಬರದಂತೆ ಇದು ತಡೆಯುತ್ತದೆ.

ಕರ್ಬೂಜ ಸೇವನೆ ಮಾಡುವುದ್ರಿಂದ ಮಲವಿಸರ್ಜನೆ ಸಮಸ್ಯೆ ದೂರವಾಗುತ್ತದೆ. ಕರ್ಬೂಜ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇದ್ರಿಂದ ಮಲವಿಸರ್ಜನೆ ಸುಲಭವಾಗುತ್ತದೆ. ಸದಾ ಕರ್ಬೂಜ ಸೇವನೆ ಮಾಡುವುದ್ರಿಂದ ಚರ್ಮ ಹೊಳಪು ಪಡೆಯುತ್ತದೆ. ಜೊತೆಗೆ ಮೂತ್ರಪಿಂಡದ ಆರೋಗ್ಯಕ್ಕೆ ಇದು ಸಹಕಾರಿ.

ಕರ್ಬೂಜದಲ್ಲಿ ವಿಟಮಿನ್ ಬಿ ಅಂಶವಿರುತ್ತದೆ. ಇದು ದೇಹಕ್ಕೆ ಶಕ್ತಿ ನೀಡುವ ಕೆಲಸ ಮಾಡುತ್ತದೆ. ದಣಿದು ಬಂದಾಗ ಕರ್ಬೂಜ ಸೇವನೆ ಮಾಡಿದ್ರೆ ದೇಹ ಶಕ್ತಿ ಪಡೆಯುತ್ತದೆ. ಇದ್ರಲ್ಲಿ ಪೊಟ್ಯಾಸಿಯಂ ಅಂಶ ಹೆಚ್ಚಿರುವುದ್ರಿಂದ ಒತ್ತಡ ಕಡಿಮೆ ಮಾಡುವ ಕೆಲಸವನ್ನೂ ಕರ್ಬೂಜ ಮಾಡುತ್ತದೆ. ಇದು ಹೃದಯ ಹಾಗೂ ಮೆದುಳಿಗೆ ಆಮ್ಲಜನಕ ಸರಿಯಾಗಿ ತಲುಪುವ ಕೆಲಸ ಮಾಡುತ್ತದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...