alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಜರಿಗಳ ಬಳಿಕವೂ ತಪ್ಪಿಲ್ಲ ‘ಮರದ ಮನುಷ್ಯ’ ನ ಸಂಕಷ್ಟ

ಬಾಂಗ್ಲಾದೇಶದ ಯುವಕ ಅಬುಲ್ ಬಜಂದರ್ ನನ್ನ ಟ್ರೀ ಮ್ಯಾನ್ ಅಂತಾನೇ ಕರೆಯಲಾಗ್ತಿದೆ. ಯಾಕಂದ್ರೆ ಇವನ ಕೈ ಮತ್ತು ಕಾಲುಗಳು ಪೂರ್ತಿಯಾಗಿ ಮರದಂತೆ  ಆಗಿಬಿಟ್ಟಿತ್ತು. ಸುಮಾರು 10 ವರ್ಷಗಳಿಂದ ಅಬುಲ್ ಈ ಸಮಸ್ಯೆಯಿಂದ ಬಳಲುತ್ತಿದ್ದ.

24 ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಅಬುಲ್ ಸಂಪೂರ್ಣ ಗುಣಮುಖನಾಗಿರೋದಾಗಿ ಹೇಳಿದ್ದರು. ಅದಾಗಿ ವರ್ಷ ಕಳೆಯುವಷ್ಟರಲ್ಲಿ ಅಬುಲ್ ಗೆ ಮತ್ತದೇ ಸಮಸ್ಯೆ ಶುರುವಾಗಿದೆ. ಎರಡೂ ಕೈಗಳು ಮತ್ತೆ ಮರದ ಬಿಳಲುಗಳಂತೆ ಗಟ್ಟಿಯಾಗಿ ಬೆಳೆಯುತ್ತಿವೆ.

ಸಮಂತಾ ಲಾಲ್ ಸೇನ್ ಎಂಬ ತಜ್ಞ ವೈದ್ಯರು ಅಬುಲ್ ಗೆ ಸರ್ಜರಿ ಮಾಡಿದ್ದರು. ವೈದ್ಯಕೀಯ ಇತಿಹಾಸದಲ್ಲೇ ಇದೊಂದು ಅಪರೂಪದ ಪ್ರಕರಣವಾಗಿದ್ದು, ಆತನಿಗೆ ಚಿಕಿತ್ಸೆ ನೀಡುವುದು ಬಹುದೊಡ್ಡ ಸವಾಲು ಅಂತಾ ಹೇಳಿದ್ದಾರೆ. ಆದ್ರೆ ಪ್ರಯತ್ನ ಮುಂದುವರಿಸೋದಾಗಿ ತಿಳಿಸಿದ್ದಾರೆ.

27 ವರ್ಷದ ಅಬುಲ್ ಗೆ ತಾನು ಮತ್ತೆ ಗುಣಮುಖನಾಗಬಹುದು ಅನ್ನೋ ನಿರೀಕ್ಷೆಗಳೇ ಇಲ್ಲ. ಢಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲೇ ಪುಟ್ಟದೊಂದು ಕೋಣೆಯಲ್ಲಿ ಪತ್ನಿ ಹಾಗೂ 4 ವರ್ಷದ ಮಗಳು ಕೂಡ ವಾಸವಾಗಿದ್ದಾರೆ.

ಈವರೆಗೆ ಶಸ್ತ್ರಚಿಕಿತ್ಸೆ ಮಾಡಿ ಸುಮಾರು 5 ಕೆಜಿ ತೂಕದ ಮರದಂತೆ ಬೆಳೆದಿದ್ದ ಭಾಗವನ್ನು ತೆಗೆದುಹಾಕಲಾಗಿದೆ. ಮತ್ತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅಬುಲ್ ಭಯಪಡುತ್ತಿದ್ದಾನೆ. ಈ ಖಾಯಿಲೆಗೆ ಎಪಿಡರ್ಮಾಡಿಸ್ಪ್ಲಾಸಿಯಾ ವರ್ರುಕ್ಯುಫಾರ್ಮಿಸ್ ಅಥವಾ ಟ್ರೀ ಮ್ಯಾನ್ ಡಿಸೀಸ್ ಎಂದು ಕರೆಯಲಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...