alex Certify
ಕನ್ನಡ ದುನಿಯಾ       Mobile App
       

Kannada Duniya

20 ವರ್ಷಗಳಿಂದ ಕಾಡುತ್ತಿದ್ದ ನಿಗೂಢ ಖಾಯಿಲೆಗೆ ಈಗ ಸಿಕ್ಕಿದೆ ಪರಿಹಾರ

ಮಹಿಳೆಯೊಬ್ಬಳಿಗೆ ತಲೆಯಲ್ಲಿ ಯಾರೋ ಮಾತನಾಡಿದಂತೆ ಕೇಳಿಸುತ್ತಿತ್ತು. ಆಕೆ ಈಗ ಎಂಜಿನಿಯರಿಂಗ್ ಪದವೀಧರೆ. 12 ವರ್ಷದವಳಿದ್ದಾಗ್ಲೇ ಕಾಣಿಸಿಕೊಂಡಿದ್ದ ಸಮಸ್ಯೆ ಇದು. ಈ ಬಗ್ಗೆ ಹೇಳಿಕೊಂಡಾಗ ಮನೆಯವರೆಲ್ಲ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾಳೆ ಅಂತಾ ಅನುಮಾನಪಟ್ಟಿದ್ದರು.

ಈ ವಿಚಿತ್ರ ಸಮಸ್ಯೆಗೆ ಪರಿಹಾರ ಹುಡುಕಲು ಬೆಂಗಳೂರು ಮತ್ತು ಮುಂಬೈನ ಆಸ್ಪತ್ರೆಗಳಲ್ಲಿ ಹತ್ತಾರು ಬಗೆಯ ಪರೀಕ್ಷೆ ನಡೆಸಲಾಗಿತ್ತು. 20 ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದೆ. ಇದು ಕೂಡ ಮೂರ್ಛೆರೋಗದ ಒಂದು ಅಪರೂಪದ ಲಕ್ಷಣ ಅಂತಾ ವೈದ್ಯರು ತಿಳಿಸಿದ್ದಾರೆ.

ಅದಕ್ಕೆ ಕಾರಣವಾಗಿದ್ದ ಮೆದುಳಿನ ಒಂದು ಭಾಗವನ್ನು ತೆಗೆದು ಹಾಕಿದ್ದಾರೆ. ಮುಂಬೈನಲ್ಲಿ ಯುವತಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. Temporal Lobe Epilepsy ಎಂದು ಇದಕ್ಕೆ ಕರೆಯಲಾಗುತ್ತಿದ್ದು, ಶೇ.2ರಷ್ಟು ರೋಗಿಗಳಲ್ಲಿ ಮಾತ್ರ ಕಂಡುಬರುವ ಸಮಸ್ಯೆ ಇದು.

ಆದ್ರೆ ಇದನ್ನು ನರಗಳ ಸಮಸ್ಯೆ ಅಥವಾ ಮಾನಸಿಕ ಅಸ್ವಸ್ಥತೆ ಎಂದುಕೊಂಡು ತಪ್ಪಾಗಿ ಚಿಕಿತ್ಸೆ ನೀಡುವುದೇ ಹೆಚ್ಚು. 12 ವರ್ಷದವಳಿದ್ದಾಗಲೇ ಆಕೆಗೆ ತಲೆಯಲ್ಲಿ ಯಾರೋ ಮಾತನಾಡಿದಂತೆ ಕೇಳಲಾರಂಭಿಸಿತ್ತು. ಇದು ಯಾವುದೇ ಔಷಧದಿಂದ ಗುಣವಾಗುವ ಖಾಯಿಲೆಯಲ್ಲ.

ಯಾರೋ ಜಗಳವಾಡಿದಂತೆ, ಜೋರಾಗಿ ಮಾತನಾಡಿದಂತೆ ದಿನಕ್ಕೆ 5 ಬಾರಿ ಆಕೆಗೆ ಕೇಳಿಸುತ್ತಿತ್ತು. ತಿಂಗಳಲ್ಲಿ 2 ಬಾರಿ ಗಂಟಲು ಕಟ್ಟಿಕೊಳ್ಳುತ್ತಿತ್ತು, ದವಡೆಗಳು ಬಿಗಿದುಕೊಳ್ಳುತ್ತಿದ್ದವು, ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಇದು ದೆವ್ವದ ಕಾಟ ಎಂದೇ ಕುಟುಂಬದವರು ಮೊದಲಿಗೆ ಭಾವಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...