alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿದಿನ ಗಂಟೆಗಟ್ಟಲೆ ಪ್ರಯಾಣ ಮಾಡುವವರು ಓದಲೇಬೇಕಾದ ಸುದ್ದಿ

ladies-leather-briefcase-with-ipad

ನೀವು ಪ್ರತಿನಿತ್ಯ ಕಚೇರಿಗೆ ತೆರಳಲು ಒಂದು ಗಂಟೆ ಪ್ರಯಾಣ ಮಾಡ್ತೀರಾ? ಹಾಗಿದ್ರೆ ಈ ಸುದ್ದಿಯನ್ನು ನೀವು ಓದಲೇಬೇಕು. ಗಂಟೆಗಟ್ಟಲೆ ಪ್ರಯಾಣ ಮಾಡಿ ಆಫೀಸು ತಲುಪೋದು ನಿಮ್ಮ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ. ಇತ್ತೀಚೆಗೆ ನಡೆಸಲಾದ ಸಂಶೋಧನೆಯೊಂದರಲ್ಲಿ ಇದು ದೃಢಪಟ್ಟಿದೆ.

ರಾಯಲ್ ಸೊಸೈಟಿ ಅಫ್ ಪಬ್ಲಿಕ್ ಹೆಲ್ತ್ ವರದಿಯ ಪ್ರಕಾರ, ಬಹುತೇಕ ಜನರು ತಮ್ಮ ಸಮಯವನ್ನೆಲ್ಲ ಬಸ್, ರೈಲು ಅಥವಾ ಕಾರಿನಲ್ಲೇ ಕಳೆಯುತ್ತಾರೆ. ನೀವು ಅಧಿಕ ಸಮಯವನ್ನು ಪ್ರಯಾಣದಲ್ಲಿ ಕಳೆದಷ್ಟೂ ನಿಮ್ಮ ಆರೋಗ್ಯಕ್ಕೆ ಅಪಾಯ ಹೆಚ್ಚು.

ಬ್ರಿಟನ್ ನ ಜನರು ತಮ್ಮ ಡಯಟ್ ನಲ್ಲಿ 800 ಕ್ಯಾಲೋರಿ ಸೇವಿಸ್ತಾರೆ. ಯಾಕಂದ್ರೆ ಅವರು ಆಹಾರ ಸೇವಿಸೋದು ಪ್ರಯಾಣದ ಸಮಯದಲ್ಲಿ. ನೀವು ದೀರ್ಘ ಪ್ರಯಾಣ ಮಾಡುವವರಾಗಿದ್ದರೆ ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಿ. ತುಂಬಾ ಸಮಯ ವಾಹನದಲ್ಲೇ ಕಳೆಯುವುದರಿಂದ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ.

ಟ್ರಾವೆಲಿಂಗ್ ನಲ್ಲೇ ಹೆಚ್ಚು ಸಮಯ ಕಳೆಯುವುದರಿಂದ ಆರೋಗ್ಯಕರ ಆಹಾರ ಸೇವನೆ ಕಷ್ಟಸಾಧ್ಯ. ಜೊತೆಗೆ ನಿದ್ದೆಯ ಅಭಾವವೂ ನಿಮ್ಮನ್ನು ಕಾಡುತ್ತದೆ. ಸಂಶೋಧನೆಯ ಪ್ರಕಾರ ಶೇ.44 ರಷ್ಟು ಮಂದಿ ಪ್ರಯಾಣದ ಸಂದರ್ಭದಲ್ಲಿ ಒತ್ತಡ ಅನುಭವಿಸುತ್ತಾರೆ.

ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎಂಬುದೇ ಇದಕ್ಕೆ ಕಾರಣ. ಶೇ.41 ರಷ್ಟು ಮಂದಿಯ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ, ನಿದ್ದೆಯ ಅಭಾವ ಉಂಟಾಗುತ್ತದೆ. ಪ್ರಯಾಣದಲ್ಲೇ ಹೆಚ್ಚಿನ ಸಮಯ ಕಳೆಯುವ ಬಹಳಷ್ಟು ಮಂದಿ ಜಂಕ್ ಫುಡ್ ಹೆಚ್ಚು ತಿನ್ನುತ್ತಾರೆ. ಹಾಗಾಗಿ ಕಚೇರಿಯ ಸಮೀಪದಲ್ಲೇ ಮನೆ ಮಾಡಿಕೊಳ್ಳುವುದು ಉತ್ತಮ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...