alex Certify
ಕನ್ನಡ ದುನಿಯಾ       Mobile App
       

Kannada Duniya

ಅಹ್ಮದಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ 9 ಶಿಶುಗಳ ಸಾವು

ಅಹ್ಮದಾಬಾದ್ ನ ಅಸ್ವಾರದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ 9 ಶಿಶುಗಳು ಸಾವನ್ನಪ್ಪಿವೆ. ಶಿಶುಗಳ ತೂಕ ಕಡಿಮೆಯಿದ್ದು, ಗಂಭೀರ ಸ್ಥಿತಿಯಲ್ಲಿದ್ದವು. ಹಾಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಸಲಹೆ ನೀಡಿದ್ದರು ಎನ್ನಲಾಗ್ತಿದೆ.

ಆದ್ರೆ ದೀಪಾವಳಿ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರೆಲ್ಲ ರಜೆ ಮೇಲೆ ತೆರಳಿದ್ದರು. ಶಿಶುಗಳಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದ ಹಿನ್ನೆಲೆಯಲ್ಲಿ ಮೃತಪಟ್ಟಿವೆ ಅಂತಾ ಆರೋಪಿಸಲಾಗ್ತಿದೆ. ಆಕ್ಸಿಜನ್ ಸಿಲಿಂಡರ್ ಅಥವಾ ಇನ್ ಕ್ಯುಬೇಟರ್ ಕೊರತೆಯಿಂದ ಮಕ್ಕಳು ಸಾವನ್ನಪ್ಪಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.

ಮೃತಪಟ್ಟಿರುವ ಕೆಲವು ಶಿಶುಗಳ ತೂಕ 1 ಕೆಜಿಗಿಂತ್ಲು ಕಡಿಮೆ ಇತ್ತು. ಇನ್ನು ಕೆಲ ಮಕ್ಕಳು ಸೆಪ್ಟಿಸೆಮಿಯಾದಿಂದ ಬಳಲುತ್ತಿದ್ರು ಅಂತಾ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಎಂ.ಎಂ.ಪ್ರಭಾಕರ್ ತಿಳಿಸಿದ್ದಾರೆ. 9 ನವಜಾತ ಶಿಶುಗಳ ಸಾವಿನ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...