alex Certify
ಕನ್ನಡ ದುನಿಯಾ       Mobile App
       

Kannada Duniya

ಕರ್ನಾಟಕದಲ್ಲಿ ಹೆಚ್ಚುತ್ತಿದೆ ಮಾನಸಿಕ ಅಸ್ವಸ್ಥರ ಸಂಖ್ಯೆ

mental

ಕರ್ನಾಟಕದಲ್ಲಿ ಮಾನಸಿಕ ಅಸ್ವಸ್ಥರ ಸಂಖ್ಯೆ ದಿನೇ ದಿನೇ ಹೆಚ್ತಾನೇ ಇದೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ 2016 ರ ಪ್ರಕಾರ ದೇಶದಲ್ಲಿ 150 ಮಿಲಿಯನ್ ವಯಸ್ಕರು ಮಾನಸಿಕ ಖಾಯಿಲೆಗಳಿಂದ ಬಳಲುತ್ತಿದ್ದಾರೆ.

ಬೆಂಗಳೂರಿನ ನಿಮ್ಹಾನ್ಸ್ ಈ ಸಮೀಕ್ಷೆಯನ್ನು ನಡೆಸಿದೆ. ತಮಿಳುನಾಡು, ಕೇರಳ, ಗುಜರಾತ್, ರಾಜಸ್ಥಾನ, ಪಂಜಾಬ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಮಣಿಪುರ ಮತ್ತು ಅಸ್ಸಾಂನಲ್ಲಿ ಸಮೀಕ್ಷೆ ನಡೆಸಲಾಗಿದೆ. ಅತಿ ಹೆಚ್ಚು ಮಾನಸಿಕ ಖಾಯಿಲೆ ಕಂಡುಬಂದಿರುವುದು ಚತ್ತೀಸ್ ಗಢ, ಪಶ್ಚಿಮ ಬಂಗಾಳ, ಮಣಿಪುರ ಮತ್ತು ಅಸ್ಸಾಂನಲ್ಲಿ.

ಕರ್ನಾಟಕದಲ್ಲಿ ಶೇ.8 ರಷ್ಟು ಜನರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಇವರಲ್ಲಿ ಶೇ.7.3 ರಷ್ಟು ಮಂದಿ 13-17 ವರ್ಷದ ಒಳಗಿನವರು ಅನ್ನೋದು ಆತಂಕಕಾರಿ ಬೆಳವಣಿಗೆ. ಮಾನಸಿಕ ಖಾಯಿಲೆ ಪೀಡಿತರ ಸಂಖ್ಯೆ ಹಳ್ಳಿಗಳಿಗಿಂತ ನಗರಗಳಲ್ಲೇ ಹೆಚ್ಚಾಗಿದೆ. 10 ಜನರ ಪೈಕಿ ಒಬ್ಬರಿಗೆ ಖಿನ್ನತೆ, ಆ್ಯಂಕ್ಸೈಟಿ ಅಸ್ವಸ್ಥತೆ, ಮಾದಕ ವಸ್ತು ಬಳಕೆಯಿಂದಾದ ಅಸ್ವಸ್ಥತೆ ಸರ್ವೇಸಾಮಾನ್ಯವಾಗಿಬಿಟ್ಟಿದೆ. ನರವಿಕಾರ, ಭಯ, ಆತಂಕದಂತಹ ಫೋಬಿಯಾ ಮಹಿಳೆಯರಲ್ಲೇ ಹೆಚ್ಚಾಗಿದೆ. ಶೇ.2 ರಷ್ಟು ಜನರಿಗೆ ತೀವ್ರತರವಾದ ಮಾನಸಿಕ ಖಾಯಿಲೆಗಳಿವೆ. 18 ವರ್ಷಕ್ಕೂ ಮೇಲ್ಪಟ್ಟ ಶೇ.4.6 ರಷ್ಟು ಪುರುಷರು ಮದ್ಯ ವ್ಯಸನ ಸಂಬಂಧಿತ ಮಾನಸಿಕ ಖಾಯಿಲೆಗಳಿಂದ ಬಳಲುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...