alex Certify
ಕನ್ನಡ ದುನಿಯಾ       Mobile App
       

Kannada Duniya

ಬೇಬಿ ಕೇರ್ ಉತ್ಪನ್ನ ಬಳಸುವ ಮುನ್ನ ಎಚ್ಚರ

ಮಕ್ಕಳ ಸೌಂದರ್ಯ ವರ್ಧಕ ಉತ್ಪನ್ನದ ಮೂಲಕ ಮನೆ ಮಾತಾಗಿರುವ ಜಾನ್ಸನ್ ಆ್ಯಂಡ್ ಜಾನ್ಸನ್ ಮತ್ತೆ ಸೋಲುಂಡಿದೆ. 7ನೇ ಪ್ರಕರಣದಲ್ಲಿಯೂ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ ಸೋಲು ಕಂಡಿದೆ. ಕೆಳ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ 240 ಕೋಟಿ ರೂಪಾಯಿ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಅಮೆರಿಕಾ ಕೋರ್ಟ್ ದಂಡವನ್ನು ಮೂರು ಪಟ್ಟು ಹೆಚ್ಚು ಮಾಡಿ ಆದೇಶ ಹೊರಡಿಸಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಗೆ 760 ಕೋಟಿ ರೂಪಾಯಿ ದಂಡ ವಿಧಿಸಿದೆ.

45 ವರ್ಷದ ಸ್ಟೀಫನ್ ಹಾಗೂ ಆತನ ಪತ್ನಿ ಜಾನ್ಸನ್ ಆ್ಯಂಡ್ ಜಾನ್ಸನ್ ಉತ್ಪನ್ನ ಬಳಸಿ ಮೆಸೊಥೆಲಿಯೋಮಾ ಕ್ಯಾನ್ಸರ್ ಆಗಿದೆ ಎಂದು ದೂರು ನೀಡಿದ್ದರು. ಇಬ್ಬರಿಗೂ ಕಂಪನಿ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದರು.  ಮೆಸೊಥೆಲಿಯೋಮಾ ಒಂದು ರೀತಿಯ ಕ್ಯಾನ್ಸರ್ ಆಗಿದ್ದು, ಶ್ವಾಸಕೋಶಗಳು, ಹೊಟ್ಟೆ, ಹೃದಯ ಸೇರಿದಂತೆ ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.

120 ವರ್ಷಗಳ ಇತಿಹಾಸ ಹೊಂದಿರುವ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ ಉತ್ಪನ್ನ ಬಳಸಿ ಮೆಸೊಥೆಲಿಯೋಮಾಕ್ಕೆ ಒಳಗಾಗಿರುವುದು ಇದೇ ಮೊದಲ ಪ್ರಕರಣವಾಗಿದೆ. 30 ವರ್ಷಗಳಿಂದ ದಂಪತಿ ಬೇಬಿ ಪೌಡರ್ ಬಳಸುತ್ತಿದ್ದರಂತೆ. ಇದ್ರಿಂದ ಮೆಸೊಥೆಲಿಯೋಮಾ ಕಾಡಿದೆ ಎಂದು ದಂಪತಿ ಪರ ವಕೀಲರು ಹೇಳಿದ್ದಾರೆ.

ಜಾನ್ಸನ್ ಆ್ಯಂಡ್ ಜಾನ್ಸನ್ ಉತ್ಪನ್ನದ ವಿರುದ್ಧ ಈಗಾಗಲೇ 6,610 ದೂರುಗಳು ದಾಖಲಾಗಿವೆ. ಅದ್ರಲ್ಲಿ 7 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ. ಕಂಪನಿಗೆ 5,950 ಕೋಟಿ ದಂಡ ವಿಧಿಸಲಾಗಿದೆ. ಭಾರತದಲ್ಲಿ ಬೇಬಿ ಕೇರ್ ಉತ್ಪನ್ನದ ಮಾರುಕಟ್ಟೆ 93,000 ಕೋಟಿ. ಅದ್ರಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಶೇಕಡಾ 60ರಷ್ಟನ್ನು ಹೊಂದಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಉತ್ಪನ್ನ ಬಳಸಿ ಕ್ಯಾನ್ಸರ್ ಆದ ಮೊದಲ ಪ್ರಕರಣ 1971ರಲ್ಲಿ ದಾಖಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...