alex Certify
ಕನ್ನಡ ದುನಿಯಾ       Mobile App
       

Kannada Duniya

ಹೃದಯಾಘಾತವಾದ ಐದು ನಿಮಿಷದೊಳಗೆ ಮಾಡಿ ಈ ಕೆಲಸ

heart-attack-aid_b_26

ಆರೋಗ್ಯದ ಬಗ್ಗೆ ಎಂದೂ ಮನುಷ್ಯ ನಿರ್ಲಕ್ಷ್ಯ ಮಾಡಬಾರದು. ಅದರಲ್ಲೂ ಹೃದಯಾಘಾತದಂತಹ ಅಪಾಯಕಾರಿ ರೋಗಗಳ ಬಗ್ಗೆ ಸದಾ ಎಚ್ಚರದಿಂದಿರಬೇಕಾಗುತ್ತದೆ. ಹೃದಯಾಘಾತವಾದ ಐದು ನಿಮಿಷದೊಳಗೆ ಈ ಕೆಲಸ ಮಾಡಿದ್ರೆ ಮನುಷ್ಯ ಬದುಕುವ ಸಾಧ್ಯತೆ ಹೆಚ್ಚಿರುತ್ತದೆ.

ಹೃದಯಾಘಾತವಾದ ವ್ಯಕ್ತಿಯನ್ನು ನೇರವಾಗಿ ಮಲಗಿಸಿ.ಬಟ್ಟೆಗಳನ್ನು ಸಡಿಲಗೊಳಿಸಿ. ಇದು ಸ್ವಲ್ಪ ಆರಾಮ ನೀಡುತ್ತದೆ.

ರೋಗಿಯನ್ನು ಜನರು ಸುತ್ತುವರಿಯದಂತೆ ನೋಡಿಕೊಳ್ಳಿ. ಸಾಧ್ಯವಾದಷ್ಟು ಆಮ್ಲಜನಕ ಸಿಗುವಂತೆ ಮಾಡಿ.

ಹೃದಯಾಘಾತವಾದ ಕೆಲ ವ್ಯಕ್ತಿಗಳಿಗೆ ವಾಂತಿ ಬಂದಂತೆ ಭಾಸವಾಗುತ್ತದೆ. ಪಕ್ಕಕ್ಕೆ ತಿರುಗಿ ವಾಂತಿ ಮಾಡಲು ಹೇಳಿ. ಹೀಗೆ ಮಾಡಿದ್ರೆ ಶ್ವಾಸಕೋಶದಲ್ಲಿ ವಾಂತಿ ತುಂಬುವುದು ತಪ್ಪುತ್ತದೆ.

ರೋಗಿಯ ಕತ್ತಿನ ಭಾಗಕ್ಕೆ ಕೈ ಹಾಕಿ ನಾಡಿ ಬಡಿತವನ್ನು ಪರೀಕ್ಷಿಸಿ. ನಾಡಿ ಬಡಿತ 60-70ರಷ್ಟಿದ್ದಲ್ಲಿ ರೋಗಿಯ ರಕ್ತದೊತ್ತಡ ಕಡಿಮೆಯಾಗ್ತಿದೆ ಎಂದೇ ಅರ್ಥ. ನಾಡಿ ಬಡಿತ ಇನ್ನೂ ಕಡಿಮೆಯಾಗ್ತಿದ್ದರೆ ಆತನ ಕಾಲುಗಳನ್ನು ಮೇಲಕ್ಕೆತ್ತಿ. ಇದರಿಂದಾಗಿ ಕಾಲಿಗಾಗ್ತಿರುವ ರಕ್ತದ ಪೂರೈಕೆ ಹೃದಯದ ಕಡೆ ಬರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...