alex Certify
ಕನ್ನಡ ದುನಿಯಾ       Mobile App
       

Kannada Duniya

ದಿನದ 21 ನಿಮಿಷ ಈ ಕೆಲಸ ಮಾಡಿದ್ರೆ ಹೆಚ್ಚುತ್ತೆ ಆಯಸ್ಸು

ಕೆಲಸ ಹೆಚ್ಚಾದಂತೆ ವ್ಯಾಯಾಮ, ಯೋಗ ಮರೆತು ಹೋಗುತ್ತದೆ, ಸದಾ ಕಾಲದ ಹಿಂದೆ ಓಡುವ ಜನರು ಒತ್ತಡಕ್ಕೆ ಬಿದ್ದು ಆರೋಗ್ಯ ಹಾಳು ಮಾಡಿಕೊಳ್ತಾರೆ. ಇತ್ತೀಚಿಗೆ ನಡೆದ ಅಧ್ಯಯನವೊಂದು ವ್ಯಾಯಾಮಕ್ಕೆ ಸಂಬಂಧಿಸಿದ ಆಶ್ಚರ್ಯಕರ ವಿಷ್ಯವನ್ನು ಹೊರ ಹಾಕಿದೆ.

ಬ್ರಿಟನ್ ನ್ಯಾಷನಲ್ ಗೈಡ್ಲೈನ್ ಬಿಡುಗಡೆ ಮಾಡಿದ ವರದಿ ಪ್ರಕಾರ ಯಾವ ವ್ಯಕ್ತಿ ದಿನಕ್ಕೆ 21 ನಿಮಿಷಗಳ ಕಾಲ ವ್ಯಾಯಾಮ ಮಾಡ್ತಾನೋ ಆತನ ಆಯಸ್ಸು ವ್ಯಾಯಾಮ ಮಾಡದ ವ್ಯಕ್ತಿಗಿಂತ ಮೂರು ವರ್ಷ ಹೆಚ್ಚಿರುತ್ತದೆಯಂತೆ. 12 ತಿಂಗಳುಗಳ ಕಾಲ 6,600 ಮಂದಿ ಮೇಲೆ ಈ ಅಧ್ಯಯನ ನಡೆದಿದೆ.

ದಿನದಲ್ಲಿ 21 ನಿಮಿಷ ವ್ಯಾಯಾಮ ಮಾಡುವವರು ಅಂದ್ರೆ ತಿಂಗಳಿಗೆ ಸುಮಾರು 150 ನಿಮಿಷ ವ್ಯಾಯಾಮ ಮಾಡಿದ ವ್ಯಕ್ತಿಗಳಲ್ಲಿ ಮೂರು ವರ್ಷಗಳ ಹೆಚ್ಚುವರಿ ಜೀವನ ನಡೆಸುವ ಭರವಸೆಯಿತ್ತು ಎನ್ನಲಾಗಿದೆ. ದಿನಕ್ಕೆ 60-90 ನಿಮಿಷ ವ್ಯಾಯಾಮ ಮಾಡುವವರ ಜೀವಿತಾವಧಿ 2.4 ರಿಂದ 2.7 ವರ್ಷ ಹೆಚ್ಚಾಗುತ್ತದೆ ಎಂದು ವರದಿ ಹೇಳಿದೆ.

ವ್ಯಾಯಾಮಕ್ಕಿಂತ ಮೊದಲು ಹಾಗೂ ವ್ಯಾಯಾಮ ಮಾಡಿದ ದಿನಗಳಲ್ಲಿ ಆದ ಬದಲಾವಣೆಯನ್ನು ಅಧ್ಯಯನಕ್ಕೆ ತೆಗೆದುಕೊಂಡಿದ್ದಾರೆ. ಶೇಕಡಾ 31ರಷ್ಟು ಮಂದಿ ಸಮಯದ ಕಾರಣ, ಶೇಕಡಾ 21 ರಷ್ಟು ಮಂದಿ ವೆಚ್ಚ ಹಾಗೂ ಶೇಕಡಾ 19 ರಷ್ಟು ಮಂದಿ ಖುಷಿಯಿಲ್ಲದ ಕಾರಣ ಹೇಳಿ ವ್ಯಾಯಾಮ ಮಾಡೋದನ್ನು ಬಿಡ್ತಾರಂತೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...