alex Certify
ಕನ್ನಡ ದುನಿಯಾ       Mobile App
       

Kannada Duniya

15 ಕೋಟಿ ಭಾರತೀಯರನ್ನು ಕಾಡುತ್ತಿದೆ ಮಾನಸಿಕ ಖಾಯಿಲೆ

mental

ಮಾನಸಿಕವಾಗಿ ನಾನು ಫಿಟ್ ಆಗಿದ್ದೇನೆ ಅಂದುಕೊಂಡು ಬೇರೆಯವರು ಕೊಡುವ  ಸಲಹೆಗಳನ್ನು ಕೇಳಿ ನಕ್ಕುಬಿಡಬೇಡಿ. ಯಾಕಂದ್ರೆ ಭಾರತದಲ್ಲಿ ಮಾನಸಿಕ ಖಾಯಿಲೆ ಪೀಡಿತರ ಸಂಖ್ಯೆ ಕೇಳಿದ್ರೇನೇ ಬೆಚ್ಚಿ ಬೀಳ್ತೀರಾ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆ ಹಾಗೂ ನಿಮ್ಹಾನ್ಸ್ ನಡೆಸಿದ ಸಂಶೋಧನೆಯ ಪ್ರಕಾರ ಭಾರತದಲ್ಲಿ 15 ಕೋಟಿ ಮಾನಸಿಕ ಅಸ್ವಸ್ಥರಿದ್ದಾರೆ. ಇವರಿಗೆಲ್ಲ ಒಂದಿಲ್ಲೊಂದು ರೀತಿಯ ಮಾನಸಿಕ ಖಾಯಿಲೆಯಿದ್ದು, ಚಿಕಿತ್ಸೆಯ ಅಗತ್ಯವಿದೆ.

ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಈ ವಿವರವನ್ನು ಬಹಿರಂಗಪಡಿಸಿದ್ದಾರೆ. ಮಾನಸಿಕ ಅಸ್ವಸ್ಥತೆಗೆ ಒಳಗಾದವರಲ್ಲಿ ಬಹುತೇಕ ಮಂದಿ 30-49 ವರ್ಷದೊಳಗಿನವರು ಮತ್ತು 60 ವರ್ಷ ಮೇಲ್ಪಟ್ಟವರು. ಆಘಾತಕಾರಿ ಅಂಶ ಅಂದ್ರೆ ಮಾನಸಿಕ ಖಾಯಿಲೆ ಪೀಡಿತರ ಸಂಖ್ಯೆ ಹಳ್ಳಿಗಳಿಗಿಂತ ನಗರಗಳಲ್ಲೇ ಹೆಚ್ಚಾಗಿದೆ. ನರ ಹಾಗೂ ಒತ್ತಡ ಸಂಬಂಧಿ ರೋಗಗಳಿಂದ ಬಳಲುತ್ತಿರುವ ಪುರುಷರಿಗಿಂತಲೂ ಮಹಿಳೆಯರ ಸಂಖ್ಯೆಯೇ ಅಧಿಕ. ಹಾಗಾಗಿ ನ್ಯಾಶನಲ್ ಕಮಿಷನ್ ಆನ್ ಮೆಂಟಲ್ ಹೆಲ್ತ್ ಅನ್ನು ಸ್ಥಾಪಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ. 12 ರಾಜ್ಯಗಳ 40,000 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿ ವರದಿ ಸಿದ್ಧಮಾಡಲಾಗಿದೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...