alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ..!ಟ್ಯಾಟೂ ಹಾಕಿಸಿಕೊಂಡ 15 ವರ್ಷದ ನಂತ್ರವೂ ಕಾಡಬಹುದು ಖಾಯಿಲೆ

ಟ್ಯಾಟೂ ಈಗ ಫ್ಯಾಷನ್. ಮೈಮೇಲೆಲ್ಲ ಟ್ಯಾಟೂ ಹಾಕಿಸಿಕೊಳ್ಳುವವರಿದ್ದಾರೆ. ಪದೇ ಪದೇ ಟ್ಯಾಟೂ ಟ್ರೆಂಡ್ ಬದಲಿಸುವವರ ಸಂಖ್ಯೆಯೂ ಹೆಚ್ಚಿದೆ. ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ ಇಂದೇ ಟ್ಯಾಟೂ ಸಹವಾಸ ಬಿಟ್ಟುಬಿಡಿ. ಈ ಟ್ಯಾಟೂ ಮಾರಕ ರೋಗ ಕ್ಯಾನ್ಸರ್ ಗೆ ಕಾರಣವಾಗಬಹುದು ಎಚ್ಚರ.

ಮಹಿಳೆಗೆ ತನ್ನ ದೇಹದ ಯಾವುದೇ ಭಾಗದಲ್ಲಿ ಗಡ್ಡೆಯಾದಂತೆ ಭಾಸವಾದ್ರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ತಜ್ಞರು ಸಲಹೆ ನೀಡ್ತಾರೆ. ಈ ಗಡ್ಡೆಗೆ ಟ್ಯಾಟೂ ಕೂಡ ಕಾರಣವಾಗಬಹುದು. ಯಸ್, ಮಹಿಳೆಯೊಬ್ಬಳಿಗೆ ಟ್ಯಾಟೂವಿನಿಂದ ಕ್ಯಾನ್ಸರ್ ಬಂದಿದೆ.

ಇಂಟರ್ನಲ್ ಮೆಡಿಸಿನ್ ನಲ್ಲಿ ಪ್ರಕಟವಾದ ವರದಿ ಪ್ರಕಾರ, 30 ವರ್ಷದ ಮಹಿಳೆಯೊಬ್ಬಳ ಕಂಕುಳಿನಲ್ಲಿ ಗಡ್ಡೆ ಕಾಣಿಸಿಕೊಂಡಿದೆ. ತಕ್ಷಣ ಮಹಿಳೆ ವೈದ್ಯರನ್ನು ಭೇಟಿ ಮಾಡಿದ್ದಾಳೆ.ಎರಡು ವಾರದಲ್ಲಿ ಬೆಳೆದ ಈ ಗಡ್ಡೆ ಬಗ್ಗೆ ಮಹಿಳೆಯಿಂದ ಸಾಕಷ್ಟು ಮಾಹಿತಿ ಪಡೆದಿದ್ದಾರೆ ವೈದ್ಯರು. ನಂತ್ರ PET-CT ಸ್ಕ್ಯಾನ್ ಮಾಡಿದ್ದಾರೆ.

ಇದ್ರಲ್ಲಿ ಬಂದ ವರದಿ ವೈದ್ಯರನ್ನು ದಂಗಾಗಿಸಿದೆ. ಮಹಿಳೆ ಎದೆ ಭಾಗದಲ್ಲಿ ಲಿಂಫೋಮಾ ಕ್ಯಾನ್ಸರ್ ಲಕ್ಷಣ ಕಾಣಿಸಿದೆ. ಆದ್ರೆ ಸರಿಯಾಗಿ ಪರೀಕ್ಷೆ ನಡೆಸಿದಾಗ ಅದು ಟ್ಯಾಟೂವಿನಿಂದ ಉಂಟಾದ ಗಡ್ಡೆ ಎಂಬುದು ವೈದ್ಯರಿಗೆ ತಿಳಿದಿದೆ. ವಿಶೇಷವೆಂದ್ರೆ ಮಹಿಳೆ 15 ವರ್ಷಗಳ ಹಿಂದೆ ಹಚ್ಚೆ ಹಾಕಿಸಿಕೊಂಡಿದ್ದಳು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...