alex Certify
ಕನ್ನಡ ದುನಿಯಾ       Mobile App
       

Kannada Duniya

ಒಬ್ಬ ಮಹಿಳೆ ಜೊತೆ ಸಂಬಂಧ ಬೆಳೆಸಿದ 13 ಮಂದಿಗೆ ಏಡ್ಸ್

ಗೋರಖ್ಪುರದ ಬಟಹಟ್ ಗ್ರಾಮದಲ್ಲಿ 13 ಮಂದಿ ಏಡ್ಸ್ ನಿಂದ ಬಳಲುತ್ತಿದ್ದಾರೆ. ಇದಕ್ಕೆ ಒಂದೇ ಕಾರಣ ಅಕ್ರಮ ಸಂಬಂಧ. ಪಾಪದ ಮಹಿಳೆ ಜೀವ ಹಿಂಡಿದ 13 ಮಂದಿ ಪಾಪಿಗಳು ಈಗ ಏಡ್ಸ್ ನಿಂದ ಬಳಲುವಂತಾಗಿದೆ. ಅಸುರಕ್ಷಿತ ಲೈಂಗಿಕ ಸೆಕ್ಸ್ ಭಾರತದಲ್ಲಿ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ.

ಆರು ವರ್ಷಗಳ ಹಿಂದೆ 24 ವರ್ಷದ ಮಹಿಳೆಯೊಬ್ಬಳು ಈ ಗ್ರಾಮಕ್ಕೆ ಮದುವೆಯಾಗಿ ಬಂದಿದ್ದಳು. ಆಕೆ ಪತಿ ಮುಂಬೈನಲ್ಲಿ ಕೆಲಸ ಮಾಡ್ತಿದ್ದ. ಆದ್ರೆ ಎರಡು ವರ್ಷಗಳ ಹಿಂದೆ ಯಾವುದೋ ಖಾಯಿಲೆಗೆ ತುತ್ತಾಗಿ ಸಾವನ್ನಪ್ಪಿದ್ದಾನೆ. ಆತನ ಸಾವಿನ ನಂತ್ರ ಮಹಿಳೆ ರೇಷನ್ ಕಾರ್ಡ್ ಹಾಗೂ ವಿಧವಾ ವೇತನ ಪಡೆಯಲು ಮುಂದಾಗಿದ್ದಳು. ಇದಕ್ಕಾಗಿ ಸ್ಥಳೀಯರೊಬ್ಬರ ಸಹಾಯ ಕೇಳಿದ್ದಳು. ಆತ ಕಾರ್ಯದರ್ಶಿಗೆ ಪರಿಚಯ ಮಾಡಿಸಿದ. ಕಾರ್ಯದರ್ಶಿ ಇನ್ನೊಬ್ಬರಿಗೆ ಪರಿಚಯ ಮಾಡಿಸಿದ. ಹೀಗೆ ರೇಷನ್ ಕಾರ್ಡ್ ನೆಪದಲ್ಲಿ 13 ಮಂದಿ ಈಕೆ ಸಂಪರ್ಕಕ್ಕೆ ಬಂದಿದ್ದಾರೆ.

ಸರ್ಕಾರಿ ಸೇವೆ ಬೇಕಾದ್ರೆ ನಮ್ಮ ಜೊತೆ ಮಲಗು ಎಂದಿದ್ದಾರೆ. ವಿಧಿಯಿಲ್ಲದೆ ಮಹಿಳೆ ಎಲ್ಲರ ಜೊತೆ ಹಾಸಿಗೆ ಹಂಚಿಕೊಂಡಿದ್ದಾಳೆ. ಮೂರು ತಿಂಗಳ ಹಿಂದೆ ಮಹಿಳೆ ಆರೋಗ್ಯದಲ್ಲಿ ಏರುಪೇರಾಗಿದೆ. ಮಹಿಳೆ ತನ್ನ ಜೊತೆಗಿದ್ದವರ ಸಹಾಯ ಪಡೆದು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದಾಳೆ. ಆಗ ಆಕೆಗೆ ಏಡ್ಸ್ ಇರುವ ವಿಷ್ಯ ಗೊತ್ತಾಗಿದೆ. ಇದು ತಿಳಿಯುತ್ತಿದ್ದಂತೆ 13 ಮಂದಿ ಉಸಿರು ನಿಂತಂತಾಗಿದೆ. ಒಬ್ಬೊಬ್ಬರಾಗಿ ರಕ್ತ ಪರೀಕ್ಷೆ ಮಾಡಿಸಿದ್ದಾರೆ. ಎಲ್ಲರಿಗೂ ಏಡ್ಸ್ ಇರುವ ಸಂಗತಿ ಗೊತ್ತಾಗಿದೆ. ವಿಷ್ಯ ಇಡೀ ಊರಿಗೆ ಹಬ್ಬಿದೆ. ಸರ್ಕಾರಿ ಸೌಲಭ್ಯದ ಹೆಸರಲ್ಲಿ ಅನಾಥ ಮಹಿಳೆ ಜೀವ ಹಿಂಡಿದ 13 ಮಂದಿ ಈಗ ಜೀವ ಉಳಿಸಿಕೊಳ್ಳಲು ಪರದಾಡ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...