alex Certify ಹೀಗೆ ಮಾಡಿದ್ರೆ ಸೊಳ್ಳೆ ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ…… | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೆ ಮಾಡಿದ್ರೆ ಸೊಳ್ಳೆ ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ……

ಸೊಳ್ಳೆ ಹೆಸರು ಕೇಳಿದ್ರೇನೇ ಭಯಪಡುವಂತಹ ಪರಿಸ್ಥಿತಿ ಸದ್ಯ ನಿರ್ಮಾಣವಾಗಿದೆ. ಯಾಕಂದ್ರೆ ಈ ಸೊಳ್ಳೆಗಳು ಅಷ್ಟು ಡೇಂಜರಸ್. ಕೆಲವೊಂದು ಸೊಳ್ಳೆಗಳು ಕಚ್ಚಿದ್ರೆ ಡೆಂಘಿ, ಮಲೇರಿಯಾ, ಹಳದಿ ಜ್ವರದಂತಹ ಮಾರಣಾಂತಿಕ ಖಾಯಿಲೆಗಳು ಆವರಿಸಿಕೊಂಡುಬಿಡುತ್ತವೆ.

ಸೊಳ್ಳೆ ಕಚ್ಚಿದಲ್ಲಿ ಸಣ್ಣ ಗುಳ್ಳೆ ಏಳುವುದು, ತುರಿಕೆ ಇವೆಲ್ಲಾ ಕಾಮನ್. ಅಪಾಯಕಾರಿ ಸೊಳ್ಳೆಗಳಿಂದ ದೂರವಿರಲು ನೀವು ಕೆಲವೊಂದು ನೈಸರ್ಗಿಕ ನಿವಾರಕಗಳನ್ನು ಬಳಸಬೇಕು.

ಸಿಟ್ರೊನೆಲ್ಲಾ : ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಜನಪ್ರಿಯ ಸೊಳ್ಳೆ ನಿವಾರಕಗಳಲ್ಲಿ ಒಂದು. ಪರಿಣಾಮಕಾರಿಯಾಗಿದ್ದರೂ, ಸಿಟ್ರೊನೆಲ್ಲಾ ಅಲ್ಪಾವಧಿಗೆ ಮಾತ್ರ ರಕ್ಷಣೆ ನೀಡುತ್ತದೆ.  ಸಿಟ್ರೊನೆಲ್ಲಾ ಬಳಸಿದ್ರೆ 120 ನಿಮಿಷಗಳವರೆಗೆ ಸೊಳ್ಳೆ ಕಡಿತದಿಂದ ನಿಮ್ಮನ್ನು ರಕ್ಷಿಸುತ್ತದೆ. ಸಿಟ್ರೊನೆಲ್ಲಾ ತ್ವರಿತವಾಗಿ ಆವಿಯಾಗುತ್ತದೆ ಎಂಬುದು ಇದಕ್ಕೆ ಕಾರಣ. ಸಿಟ್ರೊನೆಲ್ಲಾ ಎಣ್ಣೆ ಅಥವಾ ಕ್ಯಾಂಡಲ್ ಗಳನ್ನು ನೀವು ಖರೀದಿಸಬಹುದು.

ನಿಂಬೆ ನೀಲಗಿರಿ : ಇದರಲ್ಲೂ ಸಿಟ್ರೊನೆಲ್ಲಾ ಅಂಶವಿದೆ. ತಾಜಾ ಪರಿಮಳವನ್ನು ಹೊಂದಿರುತ್ತದೆ. ಈ ಸಾರಭೂತ ತೈಲವನ್ನು ಬಳಸುವುದರಿಂದ ಮಲೇರಿಯಾ ಮತ್ತು ಹಳದಿ ಜ್ವರ ಹರಡುವ ಸೊಳ್ಳೆಗಳ ಕಡಿತದಿಂದ ಪಾರಾಗಬಹುದು. ಶೇಕಡಾ 32 ರಷ್ಟು ನಿಂಬೆ ನೀಲಗಿರಿ ತೈಲವನ್ನು ಬಳಸುವುದರಿಂದ ಸೊಳ್ಳೆ ಕಡಿತದಿಂದ ಮೂರು ಗಂಟೆಗಳ ಕಾಲ ಶೇಕಡಾ 95 ರಷ್ಟು ರಕ್ಷಣೆ ಸಿಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಲವಂಗ ತೈಲ : ಲವಂಗವನ್ನು ಸೊಳ್ಳೆ ಕಡಿತ ತಡೆಗಟ್ಟಲು ಸಹ ಬಳಸಲಾಗುತ್ತದೆ. ಲವಂಗ ಸಾರಭೂತ ಎಣ್ಣೆಯಲ್ಲಿ ಆಲಿವ್ ಮತ್ತು ತೆಂಗಿನ ಎಣ್ಣೆಯನ್ನು ಸೇರಿಸುವುದು ಮತ್ತು ಅದನ್ನು ನಿಮ್ಮ ಚರ್ಮದ ಮೇಲೆ ಹಚ್ಚುವುದರಿಂದ 96 ನಿಮಿಷಗಳ ಕಾಲ ಹಳದಿ ಜ್ವರ ಹರಡುವ ಸೊಳ್ಳೆಗಳಿಂದ ದೂರವಿರಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...