alex Certify ಸ್ತನ ನೋವಿನ ಬಗ್ಗೆ ಬೇಡ ನಿರ್ಲಕ್ಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ತನ ನೋವಿನ ಬಗ್ಗೆ ಬೇಡ ನಿರ್ಲಕ್ಷ್ಯ

ಸ್ತನದ ಗಾತ್ರ ಹೆಚ್ಚಳಕ್ಕೆ ನಿಸರ್ಗದತ್ತ 8 ಟಿಪ್ಸ್

ಮಹಿಳೆಯರ ಸ್ತನದಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಹಾಗಂತ ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಬೇರೆ ಬೇರೆ ಕಾರಣಕ್ಕೆ ಮಹಿಳೆಯ ಸ್ತನದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಯಾವ ಕಾರಣ ಹಾಗೂ ಅದಕ್ಕೆ ಪರಿಹಾರವೇನು ಎಂಬುದನ್ನು ಪ್ರತಿಯೊಬ್ಬ ಮಹಿಳೆ ತಿಳಿದಿರಬೇಕು.

ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಅನೇಕ ಮಹಿಳೆಯರಿಗೆ ಸ್ತನದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ಮುಟ್ಟು ಮುಗಿಯುತ್ತಿದ್ದಂತೆ ಕಡಿಮೆಯಾಗುತ್ತದೆ.

ಇನ್ನು ಕೆಲವರಿಗೆ ಸ್ತನದಲ್ಲಿ ಗಾಯವಾದ್ರೆ ನೋವು ಕಾಣಿಸಿಕೊಳ್ಳುತ್ತದೆ. ಗರ್ಭಿಣಿಯರಿಗೆ ಸ್ತನನೋವು ಕಾಣಿಸಿಕೊಳ್ಳುತ್ತದೆ. ಮೊದಲ ಮೂರು ತಿಂಗಳು ಇದು ಹೆಚ್ಚಿರುತ್ತದೆ. ಸ್ತನಪಾನ ಮಾಡಿಸುತ್ತಿರುವ ತಾಯಂದಿರಿಗೆ ಸ್ತನ ನೋವು ಸಾಮಾನ್ಯ.

ಸ್ತನದಲ್ಲಿ ಯಾವುದಾದ್ರೂ ಸೋಂಕಿದ್ದರೆ ನೋವು ಕಾಣಿಸಿಕೊಳ್ಳುತ್ತದೆ. ದೇಹದ ಹೆಚ್ಚಿನ ಭಾಗಗಳು ಒಂದು ವಯಸ್ಸಿನ ನಂತ್ರ ಬೆಳವಣಿಗೆ ಹೊಂದುವುದಿಲ್ಲ. ಆದ್ರೆ ಸ್ತನ ಹಾಗಲ್ಲ. ಸ್ತನದ ಗಾತ್ರ, ಆಕಾರದಲ್ಲಿ ಜೀವನದುದ್ದಕ್ಕೂ ಬದಲಾವಣೆಯಾಗುತ್ತಿರುತ್ತದೆ.

ತಿಂಗಳ ಪೂರ್ತಿ ಸ್ತನದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಇದಕ್ಕೆ ಹಾರ್ಮೋನ್ ಬದಲಾವಣೆ ಕಾರಣ. ಇದು ರೋಗವಲ್ಲ. ಮಾನಸಿಕ ಒತ್ತಡ ಇದಕ್ಕೆ ಕಾರಣ. ನೋವಿನ ಜೊತೆ ಊತ ಹಾಗೂ ಕೆಂಪು ಉಂಡೆಗಳು ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ಸ್ತನದ ಎಲ್ಲ ರೀತಿಯ ನೋವಿಗೂ ಚಿಕಿತ್ಸೆಯಿದೆ. ಆದ್ರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆಯ ಅಗತ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...