alex Certify ಸಾಕುಪ್ರಾಣಿಗಳಿಗೆ ಈ ʼಆಹಾರʼಗಳನ್ನು ಕೊಡುವ ಮುನ್ನ ಯೋಚಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಕುಪ್ರಾಣಿಗಳಿಗೆ ಈ ʼಆಹಾರʼಗಳನ್ನು ಕೊಡುವ ಮುನ್ನ ಯೋಚಿಸಿ

ಸಾಕುಪ್ರಾಣಿಗಳಿಗೆ ಎಲ್ಲಾ ಆಹಾರಗಳು ಉತ್ತಮವಲ್ಲ. ಇದನ್ನು ಅರಿತುಕೊಂಡು ಅವುಗಳಿಗೆ ಆಹಾರ ನೀಡಬೇಕು. ನಾವು ತಿನ್ನುವ ಆಹಾರ ಅವುಗಳಿಗೆ ಒಗ್ಗುವುದಿಲ್ಲ. ಯಾವ ಯಾವ ಆಹಾರ ನೀಡಬಾರದು ಅಂತ ತಿಳಿಯಿರಿ.

* ಕಾಫಿ ಮತ್ತು ಟೀ ಯನ್ನು ಸಾಕು ಪ್ರಾಣಿಗಳಿಗೆ ಕೊಡಬೇಡಿ. ಇದರಲ್ಲಿರುವ ಕೆಫಿನ್‌ ಅವುಗಳಿಗೆ ಆರೋಗ್ಯ ಸಮಸ್ಯೆಯುಂಟು ಮಾಡುತ್ತದೆ. ನಾಯಿ, ಬೆಕ್ಕು ಮುಂತಾದ ಪ್ರಾಣಿಗಳು ಕಾಫಿ ಕುಡಿದರೆ ಅವುಗಳ ಹೃದಯಬಡಿತ ಏರುಪೇರಾಗುವ ಸಾಧ್ಯತೆಯಿರುತ್ತದೆ.

* ಚಾಕಲೇಟ್‌ ಅದರಲ್ಲೂ ಕಪ್ಪು ಚಾಕಲೇಟ್‌ ನಾಯಿಗಳಿಗೆ ಹಾನಿಕಾರಕವಾಗಿದೆ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಕೋಕೊ ನಾಯಿಗಳಿಗೆ ಜೀರ್ಣವಾಗುವುದಿಲ್ಲ. ಆದ್ದರಿಂದ ಅದು ವಾಂತಿ ಮಾಡಿಕೊಳ್ಳಬಹುದು. ಇದರಿಂದ ಮೂತ್ರಪಿಂಡದ ವೈಫಲ್ಯವನ್ನೂ ಎದುರಿಸಬಹುದು.

* ದ್ರಾಕ್ಷಿ, ಒಣ ದ್ರಾಕ್ಷಿ ಇತ್ಯಾದಿಗಳು ನಾಯಿಯ ದೇಹಕ್ಕೆ ಒಗ್ಗುವುದಿಲ್ಲ. ಆದ್ದರಿಂದ ಇಂಥ ಆಹಾರಗಳನ್ನು ನಾಯಿಗಳಿಗೆ ನೀಡಬೇಡಿ.

* ಬಟರ್‌ ಫ್ರೂಟ್‌ನ ತಿರುಳಿನಲ್ಲಿ ಪರ್ಸಿನ್‌ ಎಂಬ ಅಂಶವಿದೆ. ಇದು ಪ್ರಾಣಿಗಳ ದೇಹಕ್ಕೆ ಸೇರಿದರೆ ಅದಕ್ಕೆ ಬೇಧಿ, ವಾಂತಿ, ಸುಸ್ತು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

* ಸಾಕು ಪ್ರಾಣಿಗಳಿಗೆ ಹಸಿ ಈರುಳ್ಳಿ ಮತ್ತು ಬೆಳ್ಳುಳ್ಳಿ ನೀಡಬಾರದು. ಅಲ್ಲದೆ ಅದಕ್ಕೆ ಮಸಾಲೆಯುಕ್ತ ಆಹಾರವನ್ನೂ ನೀಡಬಾರದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...