alex Certify ಥೈರಾಯ್ಡ್ ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಸುಲಭ ʼಉಪಾಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥೈರಾಯ್ಡ್ ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಸುಲಭ ʼಉಪಾಯʼ

ಈಗಿನ ಜೀವನಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಬಿಪಿ, ಶುಗರ್ ನಂತೆಯೇ ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಾಮಾನ್ಯ ಎನ್ನುವಂತಾಗಿದೆ. ಥೈರಾಯ್ಡ್ ಗ್ರಂಥಿ ಹೆಚ್ಚು ಥೈರಾಯ್ಡ್ ಹಾರ್ಮೋನ್ ಉತ್ಪಾದಿಸಲು ಶುರು ಮಾಡುತ್ತದೆ. ಈ ಕಾರಣದಿಂದಾಗಿ ಅನೇಕ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ಸರಿಯಾದ ಸಮಯದಲ್ಲಿ ಥೈರಾಯ್ಡ್ ಗೆ ಚಿಕಿತ್ಸೆ ಪಡೆಯದೆ ಹೋದಲ್ಲಿ ಮುಂದೆ ಅಪಾಯ ಎದುರಿಸಬೇಕಾಗುತ್ತದೆ. ಔಷಧಿ, ಮಾತ್ರೆ ಜೊತೆ ಯೋಗಾಸನಗಳು ಥೈರಾಯ್ಡ್ ನಿಯಂತ್ರಣದಲ್ಲಿಡಲು ನೆರವಾಗುತ್ತವೆ.

ಥೈರಾಯ್ಡ್ ರೋಗಿಗಳಿಗೆ ಬಾಲಾಸನ ಬಹಳ ಒಳ್ಳೆಯದು. ಇದನ್ನು ಮಕ್ಕಳ ಭಂಗಿ ಎಂದು ಕರೆಯುತ್ತಾರೆ. ಉದ್ವೇಗ ಹಾಗೂ ಅಧಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಯೋಗದಿಂದ ರಕ್ತ ದೇಹದ ತುಂಬ ಸರಾಗವಾಗಿ ಹರಡುತ್ತದೆ. ಈ ಆಸನ ಮಾಡುವವರು ಉಸಿರಾಟದ ಕ್ರಮವನ್ನು ಸರಿಯಾಗಿ ತಿಳಿದುಕೊಂಡಿರಬೇಕು.

ದೇಹವನ್ನು ವಿಶ್ರಾಂತಿ ಮಾಡಲು ಮತ್ತು ಮೆದುಳಿಗೆ ಶಾಂತಿ ನೀಡಲು ಶವಾಸನವು ತುಂಬಾ ಪ್ರಯೋಜನಕಾರಿಯಾಗಿದೆ. ಅಧಿಕ ರಕ್ತದೊತ್ತಡ ಮತ್ತು ನಿದ್ರಾಹೀನತೆಯನ್ನು ದೂರ ಮಾಡುತ್ತದೆ. ಇದನ್ನು ಮಾಡುವುದು ತುಂಬಾ ಸುಲಭ.

ಅನುಲೋಮ-ವಿಲೋಮ ಕೂಡ ಥೈರಾಯ್ಡ್ ನಿಯಂತ್ರಣಕ್ಕೆ ಸಹಾಯಕಾರಿ. ಇದನ್ನು ಮಾಡುವುದು ಕೂಡ ಸುಲಭ. ಉಸಿರಾಟದ ವಿಧಾನವನ್ನು ಇದರಲ್ಲಿ ಸರಿಯಾಗಿ ತಿಳಿದುಕೊಂಡಿರಬೇಕು. ಥೈರಾಯ್ಡ್ ನಿಂದ ಬಳಲುವವರು ಯೋಗ ತಜ್ಞರಿಂದ ತರಬೇತಿ ಪಡೆದು ಪ್ರತಿ ದಿನ ಯೋಗ ಮಾಡುವುದು ಒಳ್ಳೆಯದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...