alex Certify ಉರಿ ಮೂತ್ರ ಸಮಸ್ಯೆ ನಿವಾರಣೆಗೆ ಇಲ್ಲಿದೆ ‘ಮನೆ ಮದ್ದು’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉರಿ ಮೂತ್ರ ಸಮಸ್ಯೆ ನಿವಾರಣೆಗೆ ಇಲ್ಲಿದೆ ‘ಮನೆ ಮದ್ದು’

ದೇಹದಲ್ಲಿ ನೀರು ಕಡಿಮೆಯಾದಾಗ ಅಥವಾ ಏನಾದರೂ ಸೋಂಕು ಆದಾಗ ಮೂತ್ರ ಉರಿ ಸಮಸ್ಯೆ ಕಂಡು ಬರುತ್ತದೆ. ನಿತ್ಯ ಮೂತ್ರ ಉರಿ ಸಮಸ್ಯೆ ಬರುತ್ತಿದ್ದರೆ ಗರ್ಭಕೋಶ ತೊಂದರೆ, ಕಿಡ್ನಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈ ಸಮಸ್ಯೆಯಿಂದ ಹೊರ ಬರಬೇಕಾದರೆ ಪ್ರತಿನಿತ್ಯ ದಾಳಿಂಬೆ ಜ್ಯೂಸ್‌ ಕುಡಿಯಬೇಕು.

* ದಾಳಿಂಬೆಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಉರಿಮೂತ್ರ ಸಮಸ್ಯೆ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಇನ್ನು ದಾಳಿಂಬೆ ಜ್ಯೂಸ್‌ ಕ್ಯಾನ್ಸರ್‌ ಹಾಗೂ ಹೃದಯ ಸಂಬಂಧಿ ಕಾಯಿಲೆಯನ್ನು ತಡೆಯುವ ಸಾಮರ್ಥ್ಯ ಹೊಂದಿದೆ.

* ದಾಳಿಂಬೆಯಲ್ಲಿ ವಿಟಮಿನ್‌ ಸಿ ಇದ್ದು, ಮೂತ್ರ ಉರಿ ಕಡಿಮೆ ಮಾಡಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ.

* ಮೂತ್ರ ಉರಿ ಕಡಿಮೆ ಮಾಡುವ ಇತರ ಆಹಾರಗಳೆಂದರೆ ಕ್ರ್ಯಾನ್ ಬೆರ್ರಿ ಜ್ಯೂಸ್‌, ವಿಟಮಿನ್‌ ಸಿ ಹೆಚ್ಚಿರುವ ಕಿತ್ತಳೆ, ದ್ರಾಕ್ಷಿ, ಕಿವಿ ಹಣ್ಣು.

* ಮೂತ್ರ ಉರಿ ಕಂಡು ಬಂದರೆ ಸಾಕಷ್ಟು ನೀರು ಕುಡಿಯಬೇಕು. ನೀರು ಜಾಸ್ತಿ ಕುಡಿಯುವುದರಿಂದ ದೇಹದಲ್ಲಿರುವ ಮೂತ್ರ ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯಾವನ್ನು ಹೊರ ಹಾಕಿ ಕಿಡ್ನಿಯನ್ನು ಸಂರಕ್ಷಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...