alex Certify ಇಂದೇ ಶುರು ಮಾಡಿ ಮೂಲಂಗಿ ಸೇವನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದೇ ಶುರು ಮಾಡಿ ಮೂಲಂಗಿ ಸೇವನೆ

ಚಳಿಗಾಲದಲ್ಲಿ ಪ್ರತಿಯೊಬ್ಬರ ಅಡುಗೆ ಮನೆಯನ್ನು ಮೂಲಂಗಿ ಪ್ರವೇಶಿಸುತ್ತದೆ. ಬಹುತೇಕರು ಮೂಲಂಗಿ ಇಷ್ಟಪಡ್ತಾರೆ. ಪದಾರ್ಥದ ರೂಪದಲ್ಲಿ, ಸಲಾಡ್‌ ರೂಪದಲ್ಲಿ, ಉಪ್ಪಿನಕಾಯಿ ರೀತಿಯಲ್ಲಿ ಮೂಲಂಗಿ ಸೇವನೆ ಮಾಡ್ತಾರೆ. ಆದ್ರೆ ಕೆಲವರಿಗೆ ಮೂಲಂಗಿ ಇಷ್ಟವಾಗುವುದಿಲ್ಲ. ಮೂಲಂಗಿ ಇಷ್ಟಪಡದವರಲ್ಲಿ ನೀವೂ ಒಬ್ಬರಾಗಿದ್ದರೆ ಇದನ್ನು ಅವಶ್ಯಕವಾಗಿ ಓದಿ.

ಮೂಲಂಗಿ ಪೌಷ್ಟಿಕ ಅಂಶಗಳಿಂದ ಕೂಡಿದ್ದು ನಮ್ಮ ಮೂತ್ರಪಿಂಡವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದು ನಮ್ಮ ದೇಹದಿಂದ ವಿಷವನ್ನು ತೆಗೆದು ಹಾಕಲು ಸಹ ಸಹಾಯ ಮಾಡುತ್ತದೆ. ನಮ್ಮ ಕರುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಮೂಲಂಗಿ ಉತ್ತಮ ಪ್ರಮಾಣದ ಫೈಬರ್ ಹೊಂದಿದ್ದು, ಮಲಬದ್ಧತೆ ರೋಗಿಗಳಿಗೆ ರಾಮಬಾಣವಾಗಿದೆ.

ಹಸಿವಾಗ್ತಿಲ್ಲ ಎನ್ನುವವರು ಮೂಲಂಗಿ ರಸದೊಂದಿಗೆ ಶುಂಠಿ ರಸ ಬೆರೆಸಿ ಕುಡಿಯಿರಿ. ಇದು ಹಸಿವು ಹೆಚ್ಚಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಯನ್ನು ಗುಣಪಡಿಸುತ್ತದೆ.

ಹೊಟ್ಟೆ ಭಾರವೆನಿಸಿದ್ರೆ ಮೂಲಂಗಿ ರಸಕ್ಕೆ ಉಪ್ಪು ಬೆರೆಸಿ ಕುಡಿಯಿರಿ. ಆರಾಮವೆನಿಸುತ್ತದೆ. ಯಕೃತ್ತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರುವವರು ಮೂಲಂಗಿಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು  ಬಿಪಿ ಇರುವವರಿಗೆ ಮೂಲಂಗಿ ತುಂಬಾ ಪ್ರಯೋಜನಕಾರಿ. ಅಧಿಕ ರಕ್ತದೊತ್ತಡದಿಂದ ಬಳಲುವವರು ಮೂಲಂಗಿ ಸೇವನೆ ಮಾಡುವುದ್ರಿಂದ  ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ಇದು ಕಾಮಾಲೆ ರೋಗಿಗಳಿಗೆ ರಾಮಬಾಣ. ಪ್ರತಿದಿನ ಬೆಳಿಗ್ಗೆ  ಒಂದು ಕಚ್ಚಾ ಮೂಲಂಗಿಯನ್ನು ತಿನ್ನುವುದರಿಂದ ಕಾಮಾಲೆ ಗುಣವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...