alex Certify
ಕನ್ನಡ ದುನಿಯಾ       Mobile App
       

Kannada Duniya

ತೋಂಗ್ ಜೀನ್ಸ್ ನೋಡಿ ಫ್ಯಾಷನ್ ಪ್ರಿಯರಿಗೇ ಶಾಕ್

ಪ್ಲಾಸ್ಟಿಕ್ ಜೀನ್ಸ್, ಹಾಫ್  ಜೀನ್ಸ್, ಮಡ್ ಜೀನ್ಸ್ ಬಗ್ಗೆ ಕೇಳಿರ್ತೀರಾ. ಜಪಾನ್ ನ ಡಿಸೈನರ್ ಮೀಕೋ ಬ್ಯಾನ್ ಈಗ ಹೊಸ ಬಗೆಯ ಜೀನ್ಸ್ ಒಂದನ್ನು ಪರಿಚಯಿಸಿದ್ದಾರೆ. ಇದರ ಹೆಸರು ತೋಂಗ್ ಜೀನ್ಸ್. ಟೋಕಿಯೋದಲ್ಲಿ ನಡೆದ ಅಮೆಜಾನ್ ಫ್ಯಾಷನ್ ವೀಕ್ ನಲ್ಲಿ ತೋಂಗ್ ಜೀನ್ಸ್ ಪ್ರದರ್ಶಿಸಲಾಯ್ತು.

ಇದು 2018ರ ಸಮ್ಮರ್ ಕಲೆಕ್ಷನ್ ನ ಹೊಸ ಟ್ರೆಂಡ್ ಎನ್ನುತ್ತಿದ್ದಾರೆ ವಿನ್ಯಾಸಕರು. ಇದನ್ನು ಜೀನ್ಸ್ ಅಂತಾ ಕರೆಯೋದೆ ಕಷ್ಟ, ಯಾಕಂದ್ರೆ ಎಲ್ಲಾ ಕಡೆ ಹರಿದು ಹೋದಂತಿದೆ ವಿನ್ಯಾಸ. ಆದ್ರೆ ಈ ಜೀನ್ಸ್ ತೊಟ್ಟರೆ ಚೆನ್ನಾಗಿ ಗಾಳಿ ಆಡುತ್ತೆ ಅನ್ನೋದೇ ಒಂದು ಅಡ್ವಾಂಟೇಜ್.

ಈ ತೋಂಗ್ ಜೀನ್ಸ್ ಫೋಟೋಗಳು ಸಾಮಾಜಿಕ ತಾಣಗಳಲ್ಲೂ ವೈರಲ್ ಆಗಿವೆ. ಜನರಿಂದ ತರಹೇವಾರಿ ರಿಯಾಕ್ಷನ್ ಕೂಡ ಬಂದಿದೆ. ವಾಸ್ತವವಾಗಿ ಇದನ್ನು ಯಾರೂ ಧರಿಸಲು ಸಾಧ್ಯವಿಲ್ಲ. ಡಿಸೈನರ್ ಮಾಡಿರೋ ಯಡವಟ್ ಕೆಲಸ ಇದು ಅಂತಾ ಹಲವರು ಟೀಕಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...