alex Certify
ಕನ್ನಡ ದುನಿಯಾ       Mobile App
       

Kannada Duniya

ಮೂರೇ ದಿನದಲ್ಲಿ ಡಾರ್ಕ್ ಸರ್ಕಲ್ ಗೆ ಹೇಳಿ ಗುಡ್ ಬೈ

ಸೂರ್ಯನ ಕಿರಣ, ಕೆಟ್ಟ ಆಹಾರ ಪದ್ದತಿ, ನಿದ್ರೆ ಕೊರತೆ, ಒತ್ತಡ ಕಣ್ಣಿನ ಕೆಳ ಭಾಗ ಕಪ್ಪಾಗಲು ಕಾರಣವಾಗುತ್ತದೆ. ಇದ್ರಿಂದ ಮುಖ ವಯಸ್ಸಾದಂತೆ ಕಾಣಲು ಶುರುವಾಗುತ್ತದೆ. ಮುಖ ಸೌಂದರ್ಯ ಕಳೆದುಕೊಳ್ಳುತ್ತದೆ. ಈ ಸಮಸ್ಯೆಯಿಂದ ಹೊರ ಬರಲು ಮಾರುಕಟ್ಟೆಯಲ್ಲಿ ಸಿಗುವ ಸಾಕಷ್ಟು ಕ್ರೀಂ ಬಳಸ್ತೇವೆ. ಜೊತೆಗೆ ಬ್ಯೂಟಿ ಪಾರ್ಲರ್ ಮೊರೆ ಹೋಗ್ತೇವೆ. ಆದ್ರೆ ಮನೆಯಲ್ಲಿಯೇ ನಿಮ್ಮ ಸಮಸ್ಯೆಗೆ ಔಷಧಿಯಿದೆ. ಮೂರೇ ದಿನದಲ್ಲಿ ಕಣ್ಣಿನ ಕೆಳಗಿದ್ದ ಕಪ್ಪು ಕಲೆ ಈ ಔಷಧಿಯಿಂದ ಮಂಗಮಾಯ.

ರೋಸ್ ವಾಟರ್ : ಪ್ರತಿದಿನ ಕಣ್ಣಿನ ಕೆಳ ಭಾಗಕ್ಕೆ ಹತ್ತಿ ಸಹಾಯದಿಂದ ರೋಸ್ ವಾಟರನ್ನು ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ಕಣ್ಣನ್ನು ಸ್ವಚ್ಛಗೊಳಿಸಿಕೊಳ್ಳಿ. ಇದ್ರಿಂದ ಕಣ್ಣು ಫ್ರೆಶ್ ಆಗಿ ಕಾಣುವ ಜೊತೆಗೆ ಕಣ್ಣಿನ ಕೆಳ ಭಾಗದಲ್ಲಿದ್ದ ಕಪ್ಪು ಕಲೆ ಕೂಡ ಕಡಿಮೆಯಾಗುತ್ತದೆ.

ಟೀ ಪುಡಿ : ಟೀ ಪುಡಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ನಂತ್ರ ಹತ್ತಿ ಸಹಾಯದಿಂದ ಕಣ್ಣಿನ ಕೆಳಭಾಗಕ್ಕೆ ಹಚ್ಚಿ 15-20 ನಿಮಿಷ ಬಿಡಿ. ಪ್ರತಿದಿನ ಹೀಗೆ ಮಾಡಿದ್ರೆ ಮೂರೇ ದಿನಗಳಲ್ಲಿ ಕಣ್ಣಿನ ಕೆಳ ಭಾಗದಲ್ಲಿರುವ ಕಪ್ಪು ಕಲೆ ಕಡಿಮೆಯಾಗುತ್ತದೆ.

ಬಾದಾಮಿ ಎಣ್ಣೆ : ಬಾದಾಮಿ ಎಣ್ಣೆಯನ್ನು ಕಣ್ಣಿನ ಕೆಳಗೆ 15-20 ನಿಮಿಷವಿಡಿ. 10 ನಿಮಿಷ ನಿಧಾನವಾಗಿ ಮಸಾಜ್ ಮಾಡಿ. ನಂತ್ರ ಹತ್ತಿ ಸಹಾಯದಿಂದ ಸ್ವಚ್ಛಗೊಳಿಸಿ.

ಪುದೀನಾ : ಪುದೀನಾ ಎಲೆಗಳನ್ನು ರುಬ್ಬಿ 10 ನಿಮಿಷಗಳ ಕಾಲ ಕಣ್ಣಿನ ಕೆಳಗೆ ಹಚ್ಚಿಕೊಳ್ಳಿ. ಇದು ಡಾರ್ಕ್ ಸರ್ಕಲ್ ಕಡಿಮೆ ಮಾಡಲು ನೆರವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...