alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರುಕಟ್ಟೆಗೆ ಬಂದಿದೆ ಟೇಸ್ಟಿ ನ್ಯುಟೆಲ್ಲಾ ಲಿಪ್ ಸ್ಟಿಕ್….

ಚಾಕಲೇಟ್ ಅಂದ್ರೆ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ನ್ಯುಟೆಲ್ಲಾ ಅಂತೂ ಬಾಯಲ್ಲಿ ನೀರೂರಿಸುತ್ತೆ. ನ್ಯುಟೆಲ್ಲಾ ಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್ ಇದೆ. ಇಷ್ಟು ದಿನ ಬೆಳಗ್ಗೆ ಬ್ರೆಡ್, ಟೋಸ್ಟ್ ಗೆ ನ್ಯೂಟೆಲ್ಲಾ ಸವರಿಕೊಂಡು ತಿನ್ನುತ್ತಿದ್ದವರು ಇನ್ಮೇಲೆ ತುಟಿಗೂ ಸವರಿಕೊಳ್ಳಬಹುದು.

ಅರ್ಥಾತ್ ನ್ಯುಟೆಲ್ಲಾ ಈಗ ಲಿಪ್ ಸ್ಟಿಕ್ ರೂಪದಲ್ಲಿ ಬರ್ತಿದೆ. ಮೇಕಪ್ ಸಾಮಗ್ರಿಯಾಗಿ ಬದಲಾಗಿದೆ.  ಬ್ಯೂಟಿ ಬೇಕರಿ ನಟ್ಟಿ ಟೇಸ್ಟ್ ನ ನ್ಯುಟೆಲ್ಲಾದಿಂದ ಲಿಪ್ ಸ್ಟಿಕ್ ತಯಾರಿಸಿದೆ. ನಾಲ್ಕು ಶೇಡ್ ಗಳಲ್ಲಿ ನ್ಯುಟೆಲ್ಲಾ ಲಿಪ್ ಸ್ಟಿಕ್ ಲಭ್ಯವಿದೆ.

ನ್ಯೂಡಿ ಟೀ, ಸ್ಕಿನ್ನಿ ಡಿಪ್, ಬರ್ತಡೇ ಸೂಟ್ ಹಾಗೂ ಬೇಕ್ ಇಟ್ ನೇಕೆಡ್ ಎಂಬ ನಾಲ್ಕು ಹೆಸರುಗಳಲ್ಲಿ ನಾಲ್ಕು ಬಗೆಯ ಲಿಪ್ ಸ್ಟಿಕ್ ತಯಾರಿಸಲಾಗಿದೆ.  ಈ ನಾಲ್ಕು ಲಿಪ್ ಸ್ಟಿಕ್ ಗಳ ಬೆಲೆ ಒಟ್ಟು 45 ಡಾಲರ್. ಇದು ಸಖತ್ ಕ್ರೀಮಿಯಾಗಿ, ನ್ಯುಟೆಲ್ಲಾ ಪರಿಮಳವನ್ನು ಹೊಂದಿದೆ. ಇದು ವಾಟರ್ ಪ್ರೂಫ್ ಕೂಡ ಹೌದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...