alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ಫ್ಯಾಷನ್ ಲೋಕದ ಹೊಸ ಹೇರ್ ಸ್ಟೈಲ್….

hairstyle-580x395

ನಿಮ್ಮ ಬಳಿಯಿರುವ ಹ್ಯಾಂಡ್ ಬ್ಯಾಗ್ ತೆಗೆದುಕೊಳ್ಳಿ, ಅದರಲ್ಲಿರುವ ವಸ್ತುಗಳನ್ನೆಲ್ಲ ಖಾಲಿ ಮಾಡಿ. ಬ್ಯಾಗ್ ನ ಚೈನ್ ಇರುವ ಭಾಗವನ್ನು ತಲೆಯ ಮೇಲೆ ಧರಿಸಿ. ಅರೆ ಇದೇನು? ಬ್ಯಾಗ್ ಯಾಕೆ ತಲೆಗೆ ಹಾಕಿಕೊಳ್ಬೇಕು ಅಂತಾ ಅಚ್ಚರಿಪಡಬೇಡಿ. ಇದು ಫ್ಯಾಷನ್ ದುನಿಯಾದ ಹೊಸ ಹೇರ್ ಸ್ಟೈಲ್. ಪ್ಯಾರಿಸ್ ನಲ್ಲಿ ನಡೆದ ಫ್ಯಾಷನ್ ಶೋ ಒಂದರಲ್ಲಿ ಈ ಸ್ಟೈಲ್ ಎಲ್ಲರನ್ನು ಸೆಳೆದಿದೆ.

ಇಬ್ಬರು ಮಾಡೆಲ್ ಗಳು ಲೇಡಿಸ್ ಪರ್ಸ್ ಅನ್ನು ಹ್ಯಾಟ್ ನಂತೆ ತಲೆ ಮೇಲೆ ಹಾಕಿಕೊಂಡಿದ್ರು. ಬೇರೆ ಬೇರೆ ಬಣ್ಣದ ಬ್ಯಾಗ್ ಗಳನ್ನು ತಲೆ ಮೇಲೆ ಹಾಕಿಕೊಂಡು ಕ್ಯಾಟ್ ವಾಕ್ ಮಾಡಿದ್ರು. ಆದ್ರೆ ಈ ಸ್ಟೈಲ್ ವಾಸ್ತವವಾಗಿ ಎಷ್ಟು ಸೂಟ್ ಆಗುತ್ತೆ ಅನ್ನೋ ಬಗ್ಗೆ ಫ್ಯಾಷನ್ ಡಿಸೈನರ್ ಗಳಿಗೆ ಖಚಿತತೆ ಇಲ್ಲ.

ಈ ರೀತಿ ಬ್ಯಾಗ್ ಹೇರ್ ಸ್ಟೈಲ್ ಮಾಡಿಕೊಳ್ಳೋದ್ರಿಂದ ಹೊಸ ಟ್ರೆಂಡ್ ಶುರುವಾಗಲಿದೆ, ಜೊತೆಗೆ ಎಲ್ಲರೂ ಇತ್ತ ಆಕರ್ಷಿತರಾಗ್ತಾರೆ ಅನ್ನೋದು ಅವರ ಲೆಕ್ಕಾಚಾರ. ಇದ್ರಿಂದ ನೀವು ಮುಖದ ಮೇಲಿನ ಕಲೆಯನ್ನು ಮರೆಮಾಡಬಹುದು, ತಲೆಕೂದಲ ಮೇಲೆ ಧೂಳು ಕೂರದಂತೆ ಕಾಪಾಡಿಕೊಳ್ಳಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...