alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣಗುಡ್ಡೆ ಮೇಲೂ ಟ್ಯಾಟೂ ಹಾಕಿಸಿಕೊಂಡಿದ್ದಾನೆ ಭೂಪ!

ದೆಹಲಿ ಮೂಲದ ಕರಣ್ ಟ್ಯಾಟೂ ಕಲಾವಿದ. 28ರ ಹರೆಯದ ಕರಣ್ ಗೆ ತನ್ನ ಮೈಮೇಲೆ ಎಷ್ಟು ಟ್ಯಾಟೂ ಇದೆ ಅನ್ನೋದೇ ಗೊತ್ತಿಲ್ಲ. ಆದ್ರೆ ಲೇಟೆಸ್ಟ್ ಟ್ಯಾಟೂ ಮಾತ್ರ ಎಂದಿಗೂ ಮರೆಯುವಂಥದ್ದಲ್ಲ. ಯಾಕಂದ್ರೆ ಕರಣ್, ಕಣ್ಣುಗುಡ್ಡೆಗಳ ಮೇಲೆ ಟ್ಯಾಟೂ ಹಾಕಿಸಿಕೊಂಡಿರೋ ಮೊದಲ ಭಾರತೀಯ.

ಕಣ್ಣುಗುಡ್ಡೆಯ ಬಿಳಿ ಭಾಗದ ಮೇಲೆ ಬಣ್ಣವನ್ನು ಇಂಜೆಕ್ಟ್ ಮಾಡಲಾಗುತ್ತದೆ. ಆಗ ಕಣ್ಣುಗುಡ್ಡೆಯ ಬಣ್ಣವೇ ಬದಲಾಗುತ್ತದೆ. ಹೀಗೆ ಕಣ್ಣಿಗೆ ಟ್ಯಾಟೂ ಹಾಕಿಸಿಕೊಳ್ಳುವುದರಿಂದ ದುಷ್ಪರಿಣಾಮ ಕೂಡ ಉಂಟಾಗುವ ಸಾಧ್ಯತೆ ಇದೆ. 13 ವರ್ಷದವರಿದ್ದಾಗ ಕರಣ್ ಮೊದಲ ಬಾರಿ ಟ್ಯಾಟೂ ಹಾಕಿಸಿಕೊಂಡಿದ್ದರಂತೆ.

16ನೇ ವರ್ಷದಿಂದ್ಲೇ ತಾವೇ ಇತರರಿಗೆ ಟ್ಯಾಟೂ ಹಾಕಲು ಶುರುಮಾಡಿದ್ದರು. ಅದನ್ನೇ ವೃತ್ತಿಯಾಗಿಸಿಕೊಂಡು ನಂತರ ದೆಹಲಿಯಲ್ಲಿ ಸ್ಟುಡಿಯೋ ಆರಂಭಿಸಿದ್ರು. ಕಣ್ಣುಗುಡ್ಡೆಯಿಂದ ಹಿಡಿದು ಕರಣ್ ಮೈತುಂಬಾ ಟ್ಯಾಟೂ ಇದೆ. ಕಣ್ಣಿನ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಕುಟುಂಬದವರು ಮತ್ತು ಸ್ನೇಹಿತರನ್ನು ಒಪ್ಪಿಸಲು ಕರಣ್ ಸಾಕಷ್ಟು ಕಷ್ಟಪಡಬೇಕಾಯ್ತು.

ಕಣ್ಣಿನ ಗುಡ್ಡೆ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಕ್ಕೆ ಕರಣ್ ಗೆ ಯಾವುದೇ ಪಶ್ಚಾತ್ತಾಪವಿಲ್ಲ, ಬದಲಾಗಿ ಹೆಮ್ಮೆಯಿದೆ. ಅಮೆರಿಕದಲ್ಲೂ ಆ ಟ್ಯಾಟೂವಿನಿಂದಾಗಿಯೇ ಕರಣ್ ಗೆ ಸಾಕಷ್ಟು ಗೌರವ ಸಿಕ್ಕಿತ್ತಂತೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...