alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗರಿಗೆ ಹುಚ್ಚು ಹಿಡಿಸುತ್ತೆ ಹುಡುಗಿಯರ ಈ ಸ್ಟೈಲ್

inext_p_LRel_8jun16P1

ಹುಡುಗಿಯರ ಕೆಲವೊಂದು ಡ್ರೆಸ್ ಹಾಗೂ ಅವರ ವಿಭಿನ್ನ ಶೈಲಿ ಹುಡುಗರನ್ನು ಆಕರ್ಷಿಸುತ್ತೆ. ಮುಖ, ಬಣ್ಣ ನೋಡಿಯಲ್ಲ, ಹುಡುಗಿಯರ ಸ್ಟೈಲ್ ನೋಡಿ ಮರುಳಾಗುವ ಹುಡುಗರಿದ್ದಾರೆ. ಹಾಗಿದ್ರೆ ಬನ್ನಿ ಯಾವ ರೂಪಕ್ಕೆ ಹುಡುಗರು ಬೋಲ್ಡ್ ಆಗ್ತಾರೆ ನೋಡೋಣ.

ಗ್ಲಾಸ್ : ಸಾಮಾನ್ಯವಾಗಿ ಹುಡುಗಿಯರು ಗ್ಲಾಸ್ ಹಾಕೋದಕ್ಕೆ ಇಷ್ಟಪಡೋದಿಲ್ಲ. ಪುಸ್ತಕ ಹುಳು ಅಂತಾ ಹುಡುಗರು ತಿಳಿದುಬಿಡ್ತಾರೆ ಎಂಬ ಭಯ ಹುಡುಗಿಯರಿಗೆ. ಆದ್ರೆ ಈ ಕಲ್ಪನೆ ಸಂಪೂರ್ಣ ತಪ್ಪು. ಸ್ಟೈಲ್ ಹಾಗೂ ಫ್ಯಾಷನೇಬಲ್ ಗ್ಲಾಸ್ ಹುಡುಗಿಯರನ್ನು ಮತ್ತಷ್ಟು ಹಾಟ್ ಮಾಡುತ್ತೆ.

ಲೆದರ್ ಜಾಕೆಟ್ : ಬೈಕ್ ಓಡಿಸುವಾಗ ಮಾತ್ರ ಲೆದರ್ ಜಾಕೆಟ್ ಧರಿಸಬೇಕೆನ್ನುವ ನಿಯಮವಿಲ್ಲ. ಸೂಕ್ತವೆನಿಸುವ ಡ್ರೆಸ್ ಗೆ ಲೆದರ್ ಜಾಕೆಟ್ ಹಾಕಿಕೊಂಡ್ರೆ ನಿಮ್ಮ ಲುಕ್ ಬದಲಾಗುತ್ತೆ. ಬೋಲ್ಡ್ ಲುಕ್ ಗೆ ಹುಡುಗರು ಕ್ಲೀನ್ ಬೋಲ್ಡ್ ಆಗ್ತಾರೆ.

ಯೋಗ ಪ್ಯಾಂಟ್ : ಫಿಟ್ ಆಗಿರಲು ವ್ಯಾಯಾಮ ಅಗತ್ಯ. ಅದರಲ್ಲೂ ಯೋಗ ಒಳ್ಳೆಯದು. ಯೋಗ ಪ್ಯಾಂಟ್ ಧರಿಸಿ ಯೋಗ ಮಾಡಲು ಹೋದ್ರೆ ಹುಡುಗರಿಗೆ ಹುಚ್ಚು ಹಿಡಿಯೋದು ನಿಶ್ಚಿತ.

ಮೇಕಪ್ ಇಲ್ಲದ ಮುಖ : ಮೇಕಪ್ ನಲ್ಲಿ ಮುಗ್ದತೆ ಮುಚ್ಚಿ ಹೋಗುತ್ತದೆ. ಎಲ್ಲ ಸಮಯದಲ್ಲೂ ಮೇಕಪ್ ಸೂಕ್ತವೆನಿಸುವುದಿಲ್ಲ. ಮೇಕಪ್ ಬಳಿದಿರುವ ಮುಖ ನೋಡಿ ನೋಡಿ ಬೇಸತ್ತ ಹುಡುಗರಿಗೆ ಮೇಕಪ್ ಇಲ್ಲದ ಸೀದಾ ಸಾದಾ ಹುಡುಗಿ ಇಷ್ಟವಾಗ್ತಾಳೆ.

ಹುಡುಗರ ಬಟ್ಟೆ : ಹುಡುಗರ ದೊಡ್ಡ ಶರ್ಟ್ ನಲ್ಲಿ ಹುಡುಗಿಯರು ಸಿಕ್ಕಾಪಟ್ಟೆ ಹಾಟ್ ಕಾಣ್ತಾರೆ. ಹುಡುಗರ ಕಪಾಟಿನಲ್ಲಿರುವ ಯಾವುದೇ ಬಟ್ಟೆ ತೆಗೆದು ನೀವು ಹಾಕಿಕೊಂಡ್ರೆ ಹುಡುಗರು ಬೀಳೋದು ಗ್ಯಾರಂಟಿ.

ಸ್ನೀಕರ್ಸ್ : ಹೈ ಹೀಲ್ಡ್ ಈಗ ಕಾಮನ್. ಪಾದಗಳ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಹುಡುಗಿಯರು ಹೈ ಹೀಲ್ಡ್ ಮೊರೆ ಹೋಗ್ತಾರೆ. ಆದ್ರೆ ಸ್ನೀಕರ್ಸ್ ಕೂಡ ನಿಮ್ಮ ಕಾಲಿನ ಲುಕ್ ಬದಲಿಸುತ್ತೆ. ಇದನ್ನೂ ಹುಡುಗರು ಇಷ್ಟಪಡ್ತಾರೆ.

ಕೆಲ ಬಣ್ಣ : ಪಿಂಕ್ ಹುಡುಗಿಯರಿಗೆ ಮೀಸಲು. ಆದ್ರೆ ಇನ್ನೂ ಕೆಲ ಅಚ್ಚು ಬಣ್ಣದ ಬಟ್ಟೆ ಹುಡುಗಿಯರ ಲುಕ್ ಬದಲಿಸುತ್ತೆ. ಹಳದಿ, ಹಸಿರು, ನೇರಳೆ.

ಒಂದು ತಂಡದ ಜರ್ಸಿ : ನಿಮಗೆ ಕ್ರೀಡೆ ಇಷ್ಟ ಇರಲಿ ಬಿಡಲಿ, ಯಾವುದಾದ್ರೂ ತಂಡದ ಜರ್ಸಿ ತೊಟ್ಟರೆ ಹುಡುಗರು ನಿಮ್ಮನ್ನು ಇಷ್ಟ ಪಡೋದ್ರಲ್ಲಿ ಸಂಶಯವಿಲ್ಲ. ಬಾಯ್ಸ್ ಇಂಪ್ರೆಸ್ ಮಾಡಬೇಕಾದ್ರೆ ಯಾವುದಾದ್ರೂ ತಂಡದ ಜರ್ಸಿ ಧರಿಸಿ. ಜರ್ಸಿ ಖರೀದಿಸಲು ಸಾಧ್ಯವಾಗಿಲ್ಲವೆಂದಾದ್ರೆ ಸಿಂಪಲ್ಲಾಗಿರುವ ಜರ್ಸಿ ಧರಿಸಿ. ಇದು ಕೂಡ ಹುಡುಗರನ್ನು ಆಕರ್ಷಿಸುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...