alex Certify
ಕನ್ನಡ ದುನಿಯಾ       Mobile App
       

Kannada Duniya

ಮುಖದ ಭಾವನೆಗಳನ್ನು ಬಿಂಬಿಸುವ ಬ್ಯಾಗ್ ಗಳು

img-thing

ಭಾರತೀಯ ವಿದ್ಯಾರ್ಥಿನಿ ಹೊಸ ವಿನ್ಯಾಸದ ಬ್ಯಾಗ್ ಡಿಸೈನ್ ಮಾಡುವುದರ ಮೂಲಕ ಫ್ಯಾಷನ್ ಲೋಕದಲ್ಲಿ ಹೊಸ ಅಲೆಯನ್ನೆಬ್ಬಿಸಿದ್ದಾಳೆ. ಸಾಮಾಜಿಕ ವಲಯಗಳಲ್ಲಿ ಜನರ ಸಂಬಂಧಗಳನ್ನು ಗಟ್ಟಿಗೊಳಿಸಲು ಮತ್ತು ಜನರ ನಡುವೆ ಮೌಖಿಕ ಸಂಭಾಷಣೆಗಳು ನಡೆಯಬೇಕೆಂಬ ಹಿನ್ನಲೆಯಲ್ಲಿ ಮಧುರಾ ಕುಲಕರ್ಣಿ ಎಲ್ಇಡಿ ಎಮೊಜೀಸ್ ಬ್ಯಾಗನ್ನು ತಯಾರಿಸಿದ್ದಾಳೆ.

ನಾಸಿಕ್ ಮೂಲದ ಮಧುರಾ ಕುಲಕರ್ಣಿ ಬರ್ಮಿಂಗ್ ಹ್ಯಾಮ್ ವಿಶ್ವವಿದ್ಯಾಲಯದ ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿನಿ. ಇಂದು ಹೆಚ್ಚಿನ ಜನರು ಮುಖತಃ ಸಂಪರ್ಕ ಇಟ್ಟುಕೊಳ್ಳುವುದೇ ಇಲ್ಲ. ಸಾರ್ವಜನಿಕ ಸಂಬಂಧಗಳು ಹದಗೆಡಲು ಇಂದಿನ ಸಾಮಾಜಿಕ ಜಾಲತಾಣಗಳೇ ಕಾರಣ ಎನ್ನುತ್ತಾಳೆ ಮಧುರಾ.

“ಈ ಬ್ಯಾಗ್ ಎರಡು ವ್ಯಕ್ತಿಗಳ ಮಧ್ಯೆ ಸಂಪರ್ಕದ ಕೊಂಡಿಯಾಗುತ್ತದೆ ಎಂಬುದು ನನ್ನ ಪರಿಕಲ್ಪನೆ. ಉದಾಹರಣೆಗೆ ನೀವು ಈ ಎಲ್ಇಡಿ ಎಮೊಜೀಸ್ ಬ್ಯಾಗ್ ನಲ್ಲಿ ನಿಮಗೆ ಇಷ್ಟವಾದ ಡಿಸೈನ್ ಅಥವಾ ಥೀಮ್ ಅನ್ನು ಆಯ್ಕೆಮಾಡಿಕೊಳ್ಳುತ್ತೀರಿ. ನಿಮ್ಮ ಎದುರಿಗೆ ಸಿಕ್ಕ ಇನ್ನೊಬ್ಬರು ಯಾರೋ ನಿಮ್ಮದೇ ಥೀಮ್ ಅನ್ನು ಆಯ್ಕೆಮಾಡಿಕೊಡರೆ, ಆಗ ನಿಮ್ಮಿಬ್ಬರಲ್ಲಿ ಪರಸ್ಪರ ಮೌಖಿಕ ಸಂಭಾಷಣೆಗಳು ನಡೆಯುವ ಸಾಧ್ಯತೆ ಇರುತ್ತದೆ. ಇದರಿಂದ ಸಂಪರ್ಕ ಹೆಚ್ಚುತ್ತದೆ” ಎನ್ನುತ್ತಾಳೆ ಫ್ಯಾಷನ್ ಡಿಸೈನರ್ ಮಧುರಾ.

ಮಧುರಾ ಕುಲಕರ್ಣಿ ಅವರು 2016ರ ನ್ಯೂಯಾರ್ಕ್ ಹ್ಯಾಂಡ್ ಬ್ಯಾಗ್ ಡಿಸೈನರ್ ಅವಾರ್ಡ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ತಾನು ತಯಾರಿಸಿರುವ ಈ ಬ್ಯಾಗ್ ಡಿಸೈನಿಂಗ್ ಕ್ಷೇತ್ರದಲ್ಲಿ ಹೊಸತನವನ್ನು ಹುಟ್ಟುಹಾಕುತ್ತದೆ ಎಂಬ ನಂಬಿಕೆ ಅವರಿಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...