alex Certify
ಕನ್ನಡ ದುನಿಯಾ       Mobile App
       

Kannada Duniya

ತಲೆ ಸ್ನಾನಕ್ಕೆ ಟೈಂ ಇಲ್ಲವೆಂದ್ರೆ ಹೀಗೆ ಮಾಡಿ

ಕೆಲಸದ ಒತ್ತಡದಲ್ಲಿ ಕೂದಲನ್ನು ಸರಿಯಾಗಿ ತೊಳೆಯಲು ಸಮಯವಿರೋದಿಲ್ಲ. ಪಾರ್ಟಿಗೆ ಹೋಗಬೇಕು. ಆದ್ರೆ ತಲೆ ಸ್ನಾನ ಮಾಡಿಲ್ಲ ಎಂದು ಗೊಣಗುವವರಿದ್ದಾರೆ. ಅಂಥವರಿಗೆ ಇಲ್ಲೊಂದು ಖುಷಿ ಸುದ್ದಿ ಇದೆ.

ಬ್ಯೂಟಿ ತಜ್ಞ ಶಹನಾಜ್ ಹುಸೇನ್ ಕಂಪನಿ ನೀರಿನ ಅಗತ್ಯವಿಲ್ಲದೆ ಕೂದಲ ಸ್ವಚ್ಛಗೊಳಿಸುವ ಶಾಂಪೂ ಒಂದನ್ನು ಬಿಡುಗಡೆ ಮಾಡಿದೆ. ಆಯುರ್ವೇದದ ಡ್ರೈ ಶಾಂಪೂ ಇದಾಗಿದೆ. ಭಾರತ ಹಾಗೂ ಸಾಗರೋತ್ತರ ಮಾರುಕಟ್ಟೆಯಲ್ಲಿ ಈ ಶಾಂಪೂವನ್ನು ಬಿಡುಗಡೆ ಮಾಡಲಾಗಿದೆ.

ರೋಸ್ಮರಿ ಹಾಗೂ ಚಹಾ ತೈಲ ಬೆರೆಸಿ ಈ ಶಾಂಪೂ ತಯಾರಿಸಲಾಗಿದೆ. ರೋಸ್ಮರಿ ಕೂದಲನ್ನು ಬಲಪಡಿಸುವ ಜೊತೆಗೆ ಕೂದಲನ್ನು ಸ್ವಚ್ಛಗೊಳಿಸುತ್ತದೆ. ಈ ಶಾಂಪೂವಿನಿಂದ ಕೂದಲು ಉದುರುತ್ತೆ, ಬೆಳ್ಳಗಾಗುತ್ತೆ ಎನ್ನುವ ಭಯ ಬೇಡ ಎನ್ನುತ್ತಾರೆ ಶಹನಾಜ್.

ಶಾಂಪೂವಿನ ಗುಣ ಲಕ್ಷಣಗಳನ್ನು ಇದು ಹೊಂದಿದ್ದು ಸಾಮಾನ್ಯ ಶಾಂಪೂವಿಗಿಂತ ಸೌಮ್ಯವಾಗಿರುತ್ತದೆ. ನೀರಿಲ್ಲದೆ ತಲೆ ಸ್ನಾನ ಮಾಡಲು ಈ ಶಾಂಪೂ ಬೆಸ್ಟ್.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...