
ಋತು ಬದಲಾಗುವ ತಿಂಗಳು ಮಾರ್ಚ್. ಇದು ನಮ್ಮ ತ್ವಚೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಅನೇಕರ ಚರ್ಮ ಕಾಂತಿ ಕಳೆದುಕೊಂಡು ಕಪ್ಪಾಗುತ್ತದೆ. ಬೇಸಿಗೆ ಶುರುವಾಗಿರುವ ಈ ಸಮಯದಲ್ಲಿ ತಮ್ಮ ಚರ್ಮದ ಆರೈಕೆ ಮಾಡಿಕೊಳ್ಳುವ ಅವಶ್ಯಕತೆಯಿದೆ.
ಈ ಋತುವಿನಲ್ಲಿ ಚರ್ಮದ ಆರೈಕೆಗೆ ಫೇಸ್ ಸ್ಕ್ರಬ್ ಮಾಡಿಕೊಳ್ಳಬೇಕು. ಇದ್ರಿಂದ ನಿಮ್ಮ ಚರ್ಮದ ಮೇಲಿರುವ ಡೆಡ್ ಸ್ಕಿನ್ ಹೋಗಿ ಚರ್ಮ ಹೊಳಪು ಪಡೆಯುತ್ತದೆ.
ವಿಟಮಿನ್ ಸಿ ಹಾಗೂ ಮಾಯಿಶ್ಚರೈಸರ್ ಬಳಸುವುದು ಬಹಳ ಒಳ್ಳೆಯದು. ನಿಮ್ಮ ಚರ್ಮ ಒಣಗುವುದನ್ನು ಇದು ತಡೆಯುತ್ತದೆ. ಚರ್ಮಕ್ಕೆ ತೇವಾಂಶ ನೀಡುತ್ತದೆ.
ಮಲಗುವ ಮೊದಲು ಲ್ಯಾವೆಂಡರ್ ತೈಲವನ್ನು ಬಳಸಿ. ಇದು ಚರ್ಮ ಮೃದುವಾಗಲು ನೆರವಾಗುತ್ತದೆ.
ಈ ಋತುವಿನಲ್ಲಿ ದೇಹ ಹೆಚ್ಚೆಚ್ಚು ನೀರು ಬಯಸುತ್ತದೆ. ಹಾಗಾಗಿ ದೇಹ ನೀರಿನಾಂಶ ಕಳೆದುಕೊಳ್ಳದಂತೆ ಕಾಳಜಿ ವಹಿಸಿ. ಆಗಾಗ ನೀರು ಕುಡಿಯುತ್ತಿರಿ.
ಈ ಋತುವಿನಲ್ಲಿ ಆಹಾರದ ಬಗ್ಗೆ ಹೆಚ್ಚು ಗಮನ ನೀಡಿ. ಊಟದ ಜೊತೆ ಹಣ್ಣು, ತರಕಾರಿ ಸೇವನೆಯನ್ನು ಮರೆಯಬೇಡಿ.