alex Certify
ಕನ್ನಡ ದುನಿಯಾ       Mobile App
       

Kannada Duniya

ಚಳಿಗಾಲದಲ್ಲಿ ಚರ್ಮದ ರಕ್ಷಣೆ….

ಒಣ ಚರ್ಮದವರಿಗೆ ಚಳಿಗಾಲ ಶಾಪ. ಯಾಕಪ್ಪ ಚಳಿಗಾಲ ಬಂತು ಎಂದು ಗೋಳಾಡುವವರಿದ್ದಾರೆ. ಶೀತ ಹೆಚ್ಚಾದಂತೆ ಚರ್ಮ ಒಡೆದು ರಕ್ತ ಬರುವುದುಂಟು. ಕೇವಲ ಒಣ ಚರ್ಮ ಹೊಂದಿರುವವರಿಗೊಂದೇ ಅಲ್ಲ, ಆಯ್ಲಿ ಸ್ಕಿನ್ ಹೊಂದಿರುವವರೂ ಚಳಿಗಾಲದಲ್ಲಿ ಕಿರಿಕಿರಿ ಅನುಭವಿಸುತ್ತಾರೆ.

ಚಳಿಗಾಲದಲ್ಲಿ ಚರ್ಮಕ್ಕೆ ವಿಶೇಷ ಆರೈಕೆ ಅಗತ್ಯ. ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಒಣ ಚರ್ಮದಿಂದ ಮುಕ್ತಿ ಹೊಂದಿ, ಚಳಿಗಾಲದಲ್ಲಿ ನೆಮ್ಮದಿಯಿಂದಿರಬಹುದು.

ಚಳಿಗಾಲದಲ್ಲಿ ಬಾದಾಮಿ ಎಣ್ಣೆ ಬಳಕೆ ಉತ್ತಮ. ರಾತ್ರಿ ಎಣ್ಣೆ ಹಚ್ಚಿ ಮಲಗಿದರೆ, ಬೆಳಿಗ್ಗೆ ಚರ್ಮ ಒಣಗುವುದಿಲ್ಲ. ಕಾಂತಿಯುತವಾಗಿರುತ್ತದೆ. ಸೋಪ್ ಬದಲು ಸಾಸಿವೆ ಎಣ್ಣೆಯನ್ನು ಬಳಸುವುದು ಒಳ್ಳೆಯದು. ಸ್ನಾನದ ನಂತರ ಮೃದು ಬಟ್ಟೆಯಲ್ಲಿ ಮೈ ಒರೆಸಿಕೊಳ್ಳಿ. ನಂತರ ಎಣ್ಣೆ ಅಥವಾ ಲೋಷನ್ ಹಚ್ಚಿಕೊಳ್ಳಿ. ಶೀತ ಎಂಬ ಕಾರಣಕ್ಕೆ ಅತೀ ಬಿಸಿ ನೀರನ್ನು ಬಳಸಬೇಡಿ. ಅತೀ ತಣ್ಣನೆಯ ನೀರನ್ನೂ ಕೂಡ ಬಳಸಬಾರದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...