alex Certify
ಕನ್ನಡ ದುನಿಯಾ       Mobile App
       

Kannada Duniya

ಮಿಸ್ ಪೋರ್ಟೋರಿಕೋ ಈಗ ‘ವಿಶ್ವ ಸುಂದರಿ’

miss-world

ಪೋರ್ಟೋರಿಕೋ ದೇಶದ ಸ್ಟೆಫಾನಿ ಡೆಲ್ ವಲ್ಲೆ 2016 ರ ವಿಶ್ವ ಸುಂದರಿ ಕಿರೀಟಕ್ಕೆ ಭಾಜನರಾಗಿದ್ದಾರೆ. ಡೊಮಿನಿಕನ್ ರಿಪಬ್ಲಿಕ್ ಹಾಗೂ ಇಂಡೋನೇಷ್ಯಾದ ಚೆಲುವೆಯರನ್ನು ಹಿಂದಿಕ್ಕಿದ ಸ್ಟೆಫಾನಿ, ವಿಶ್ವ ಸುಂದರಿ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.

ಎಂಜಿಎಂ ನ್ಯಾಶನಲ್ ಹಾರ್ಬರ್ ನಲ್ಲಿ ನಡೆದ ಅದ್ವಿತೀಯ ಸಮಾರಂಭದಲ್ಲಿ ಸ್ಟೆಫಾನಿ ಅವರಿಗೆ ವಿಶ್ವ ಸುಂದರಿ ಕಿರೀಟ ತೊಡಿಸಲಾಯ್ತು.

19 ರ ಹರೆಯದ ಸ್ಟೆಫಾನಿ, ವಿಶ್ವ ಸುಂದರಿ ಪ್ರಶಸ್ತಿ ಗೆದ್ದ ಪೋರ್ಟೋರಿಕೋದ ಎರಡನೆಯ ಯುವತಿ ಎನಿಸಿಕೊಂಡಿದ್ದಾರೆ. ಸ್ಟೆಫಾನಿ ಅವರಲ್ಲದೆ ಇಂಡೋನೇಷ್ಯಾ, ಡೊಮಿನಿಕನ್ ರಿಪಬ್ಲಿಕ್, ಕೀನ್ಯಾ ಹಾಗೂ ಫಿಲಿಪೈನ್ಸ್ ನ ನಾಲ್ವರು ತರುಣಿಯರು ಕೂಡ ಫೈನಲ್ ಗೆ ಎಂಟ್ರಿ ಕೊಟ್ಟಿದ್ದರು.

ಕಠಿಣ ಸವಾಲುಗಳು, ಸಂದರ್ಶನ ಹಾಗೂ ಸೌಂದರ್ಯ ಎಲ್ಲದರಲ್ಲೂ ಸೈ ಎನಿಸಿಕೊಂಡ ಪೋರ್ಟೋರಿಕೋ ಸುಂದರಿ ಸ್ಟೆಫಾನಿ ಮಿಸ್ ವರ್ಲ್ಡ್ ಕಿರೀಟವನ್ನು ತಮ್ಮದಾಗಿಸಿಕೊಂಡ್ರು. ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಭಾರತದ ಪ್ರಿಯದರ್ಶಿನಿ ಚಟರ್ಜಿ ಟಾಪ್ 20 ಯಲ್ಲಿ ಸ್ಥಾನ ಪಡೆಯಲು ಮಾತ್ರ ಸಫಲರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...