alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನಿ ಹುಡುಗಿಯರ ಸೌಂದರ್ಯ ಹೆಚ್ಚಿಸ್ತಿದೆ ಈ ಡ್ರೆಸ್

pakistan-1

ದಿನಕ್ಕೊಂದು ನೂತನ ವಿನ್ಯಾಸದ ಡ್ರೆಸ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಫ್ಯಾಷನ್ ಜಗತ್ತು ಪಾಕಿಸ್ತಾನವನ್ನೂ ಬಿಟ್ಟಿಲ್ಲ. ಅಲ್ಲಿನ ಹುಡುಗಿಯರು ಕೂಡ ಬಗೆ ಬಗೆಯ ವಿನ್ಯಾಸದ ಬಟ್ಟೆಗಳನ್ನು ತೊಡುತ್ತಾರೆ. ಈಗ ಪಾಕಿಸ್ತಾನದಲ್ಲಿ ಒಂದು ಡ್ರೆಸ್ ಸುದ್ದಿ ಮಾಡ್ತಾ ಇದೆ. ಅಲ್ಲಿನ ಹುಡುಗಿಯರು ಆ ಡ್ರೆಸ್ ಧರಿಸಲು ಉತ್ಸುಕರಾಗಿದ್ದಾರೆ.

ಇದನ್ನು ಧರಿಸುವುದರಿಂದ ಬೆಡಗಿಯರ ಸೌಂದರ್ಯ ದುಪ್ಪಟ್ಟಾಗುವುದರಿಂದ ಪಾಕಿಸ್ತಾನ ಫ್ಯಾಷನ್ ಉದ್ಯಮದಲ್ಲಿ ಕೂಡ ಈ ಬಟ್ಟೆಗೆ ಭಾರೀ ಬೇಡಿಕೆ ಬಂದಿದೆ. ಅಷ್ಟಕ್ಕೂ ಆ ಡ್ರೆಸ್ ನ ಹೆಸರು ಟುಲಿಪ್ ಪ್ಯಾಂಟ್. ಅತಿಯಾದ ಸೆಕೆ ನಡುವೆ ಹುಡುಗಿಯರ ಈ ಪ್ಯಾಂಟ್ ಸಿಕ್ಕಾಪಟ್ಟೆ ಸೇಲ್ ಆಗ್ತಿದೆ. ಬಿಸಿಲಿನಲ್ಲಿ ಇದು ಒಳ್ಳೆಯದು ಎನ್ನುತ್ತಿದ್ದಾರೆ ಹುಡುಗಿಯರು.

ಟುಲಿಪ್ ಪ್ಯಾಂಟನ್ನು ಭಾರತೀಯರು ಧೋತಿ ಸಲ್ವಾರ್ ಎನ್ನುತ್ತಾರೆ. ಆದ್ರೆ ಇದು ಧೋತಿಗಿಂತ ಬಹಳ ಡಿಫ್ರೆಂಟ್ ಆಗಿದೆ. ಇದಕ್ಕೆ ಕಡಿಮೆ ಬಟ್ಟೆ ಸಾಕು. ಕುರ್ತಾ ಇರಲಿ, ಶರ್ಟ್ ಇರಲಿ ಎಲ್ಲದಕ್ಕೂ ಈ ಪ್ಯಾಂಟ್ ಸೂಟ್ ಆಗುತ್ತೆ. ಹಾಗಾಗಿಯೆ ಹುಡುಗಿಯರನ್ನು ಮತ್ತಷ್ಟು ಆಕರ್ಷಿಸ್ತಿದೆ ಈ ಪ್ಯಾಂಟ್. ಫ್ಯಾಷನ್ ಮ್ಯಾಗಜೀನ್ ಹಾಗೂ ಆನ್ಲೈನ್ ನಗಳಲ್ಲಿ ಸಾಕಷ್ಟು ಪ್ರಚಾರ ಕೂಡ ಸಿಗ್ತಾ ಇದೆ. ಈ ಪ್ಯಾಂಟ್ ಧರಿಸಿ ಹುಡುಗಿಯರು ತಮ್ಮ ಫೋಟೋಗಳನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...