alex Certify ಹಲ್ಲಿಗೆ ಹಿಡಿಯೋ ‘ಲಿಪ್‌ಸ್ಟಿಕ್’‌ ಕಿರಿಕಿರಿಗೆ ಫುಲ್‌ ಸ್ಟಾಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲ್ಲಿಗೆ ಹಿಡಿಯೋ ‘ಲಿಪ್‌ಸ್ಟಿಕ್’‌ ಕಿರಿಕಿರಿಗೆ ಫುಲ್‌ ಸ್ಟಾಪ್

ಲಿಪ್‌ಸ್ಟಿಕ್ ಹಚ್ಚುವವರಲ್ಲೊಂದು ಸಮಸ್ಯೆ ಇರುತ್ತೆ. ಆಗಾಗ ಲಿಪ್‌ಸ್ಟಿಕ್ ಹಲ್ಲಿಗೆ ಹಿಡಿದು ಬಿಡೋದು. ಅದು ಅಸಹ್ಯ ಕಾಣೋದು ಒಂದು ಕಾಮನ್ ಪ್ರಾಬ್ಲಂ. ಅದ್ರಲ್ಲೂ ತೀರಾ ಅಪರೂಪಕ್ಕೆ ಲಿಪ್‌ಸ್ಟಿಕ್ ಹಚ್ಚಿಕೊಳ್ಳುವವರಲ್ಲಿ ಈ ಸಮಸ್ಯೆ ಹೆಚ್ಚು. ಈ ರೀತಿ ಆಗಬಾರದು ಅಂದ್ರೆ ಏನು ಮಾಡ್ಬೇಕು ಗೊತ್ತಾ.

* ಲಿಪ್ ಲೈನರ್ ಹಚ್ಚಿಕೊಳ್ಳುವಾಗ ತುಟಿಯ ಒಳ ಪದರದಲ್ಲಿ ಹಚ್ಚಿಕೊಳ್ಳಬೇಡಿ. ಲಿಪ್ ಲೈನರ್ ಹಚ್ಚಿಕೊಂಡ ವಿಧಾನ ಸರಿ ಇಲ್ಲದೇ ಇದ್ದಾಗ ಸಹಜವಾಗೇ ತುಟಿಗಳಿಗೆ ಹಚ್ಚಿದ ರಂಗು ಹಲ್ಲುಗಳಿಗೂ ಹಿಡಿಯುತ್ತೆ.

* ಟ್ರಾನ್ಫರ್ಪ್ರೂಫ್ ಲಿಪ್‌ಸ್ಟಿಕ್‌ಗಳನ್ನು ಖರೀದಿಸಿ. ಕೈಗೆಟುಕುವ ಬೆಲೆಗೆ ಈ ಲಿಪ್‌ಸ್ಟಿಕ್‌ಗಳು ಲಭ್ಯವಿದ್ದು, ಇವು ಹೆಚ್ಚು ಹರಡದೇ ತುಟಿಗಳಲ್ಲೇ ಅಂಟಿಕೊಳ್ಳುತ್ತೆ. ಅಷ್ಟೇ ಅಲ್ಲ, ನಿಮ್ಮ ತುಟಿಗಳು ಸುಂದರವಾಗಿ ಕಾಣುವಂತೆ ಮಾಡುತ್ತೆ.

* ಲಿಪ್‌ಸ್ಟಿಕ್ ಹಚ್ಚಿದ ನಂತರ ಟಿಶ್ಯೂ ಪೇಪರ್ ತೆಗೆದುಕೊಂಡು ಒಮ್ಮೆ ತುಟಿಗಳನ್ನು ಪ್ರೆಸ್ ಮಾಡ್ಕೊಳ್ಳಿ. ಇದು ಲಿಪ್‌ಸ್ಟಿಕ್ ತುಟಿಗಳಲ್ಲೇ ಉಳಿಯುವಂತೆ ಮಾಡುತ್ತೆ ಮತ್ತು ಹಲ್ಲುಗಳಿಗೆ ಹಿಡಿಯುವುದನ್ನು ನಿಯಂತ್ರಿಸುತ್ತೆ.

ಟಾಲ್ಕಮ್ ಪೌಡರ್‌ ನ ಇನ್ನಷ್ಟು ಉಪಯೋಗಗಳು

* ಲಿಪ್‌ಸ್ಟಿಕ್ ಹಚ್ಚಿರೋದು ಅತಿಯಾದಾಗ, ಇಲ್ಲವೇ ಲಿಪ್‌ಸ್ಟಿಕ್ ಆಯಿಲಿ ಆಯಿಲಿಯಾಗಿದ್ದಾಗ, ಅದು ತುಟಿಗಳಲ್ಲಿ ಮಾತ್ರ ಉಳಿಯದೇ ಸ್ಪ್ರೆಡ್ ಆಗುತ್ತೆ. ಅದನ್ನು ನಿಯಂತ್ರಿಸಬೇಕು ಅಂದರೆ ತುಟಿಗಳ ಮೇಲೆ ಸ್ವಲ್ಪ ಪೌಡರ್ ಅಪ್ಲೈ ಮಾಡಿ. ನಂತರ ಸ್ಪಾಂಜ್ ಅಥವಾ ಬ್ರಷ್ ಸಹಾಯದಿಂದ ಪೌಡರ್ ಅನ್ನು ತೆಗೆದುಬಿಡಿ. ಹೀಗೆ ಮಾಡೋದ್ರಿಂದ ಹೆಚ್ಚಾದ ಲಿಪ್‌ಸ್ಟಿಕ್ ಕಡಿಮೆಯಾಗಿ ಸರಿಯಾಗಿ ತುಟಿಗಳಲ್ಲೇ ಸ್ಟಿಕ್ ಆಗಿ ಕೂರುತ್ತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...