alex Certify
ಕನ್ನಡ ದುನಿಯಾ       Mobile App
       

Kannada Duniya

80 ರಲ್ಲೂ 30 ರಂತೆ ಕಾಣ್ತಾರೆ ಇಲ್ಲಿನ ಜನ

women-1

ಸದಾ ಯುವಕರಾಗಿರಬೇಕೆನ್ನುವುದು ಎಲ್ಲರ ಬಯಕೆ. ವರ್ಷ 50 ದಾಟುತ್ತಿದ್ದಂತೆ ವಯಸ್ಸಾಯ್ತಲ್ಲ ಎಂಬ ಸಣ್ಣದೊಂದು ನೋವು, ಚಿಂತೆ ಕಾಡಲು ಶುರುವಾಗುತ್ತದೆ. ಕೂದಲು ಬೆಳ್ಳಗಾಗ್ತಿದೆ, ಮುಖದ ಮೇಲೆ ವಯಸ್ಸಾದ ಕುರುಹುಗಳು ಕಾಣ್ತಿವೆ ಎನ್ನುತ್ತಾರೆ ಅನೇಕರು. ಆದ್ರೆ ಉತ್ತರ ಪಾಕಿಸ್ತಾನದ ಕಾರಕೋರಂ ಪರ್ವತಗಳಲ್ಲಿ ವಾಸಿಸುವ ಹುಂಜ್ ಜನಾಂಗದವರಿಗೆ ಮಾತ್ರ ವಯಸ್ಸಾಗೋದೇ ಇಲ್ಲ.

ಯಸ್, ಆಶ್ಚರ್ಯವಾದ್ರೂ ಇದು ಸತ್ಯ. ಇಲ್ಲಿನ ವಾಸಿಗಳಿಗೆ ಯಾವುದೆ ರೋಗ ಕಾಣಿಸಿಕೊಳ್ಳುವುದಿಲ್ಲ. ವಯಸ್ಸಿಗಿಂತ ನಾಲ್ಕು ಪಟ್ಟು ಚಿಕ್ಕವರಂತೆ ಇವರು ಕಾಣ್ತಾರೆ. ಆರೋಗ್ಯವಂತ, ಅತಿ ಹೆಚ್ಚು ವರ್ಷ ಬದುಕುವ, ಅತಿ ಸಂತೋಷವಾಗಿರುವ ವ್ಯಕ್ತಿಗಳೆಂದು ಇವರನ್ನು ಪರಿಗಣಿಸಲಾಗಿದೆ.

ಕ್ಯಾನ್ಸರ್ ಮುಕ್ತ ಜನಾಂಗದ ಪಟ್ಟಿಯಲ್ಲಿ ಬರ್ತಾರೆ ಇಲ್ಲಿನ ಜನರು. ಇಲ್ಲಿನ ಯಾವೊಬ್ಬ ಜನರಿಗೂ ಕ್ಯಾನ್ಸರ್ ಕಾಣಿಸಿಕೊಂಡಿಲ್ಲ. ಕ್ಯಾನ್ಸರ್ ಹೆಸರನ್ನೇ ಇವರು ಕೇಳಿಲ್ಲ. ಮಹಿಳೆಯರು 65 ವರ್ಷ ವಯಸ್ಸಿನಲ್ಲಿ ಮಕ್ಕಳಿಗೆ ಜನ್ಮ ನೀಡ್ತಾರೆ. ಸುಮಾರು 87 ಸಾವಿರ ಮಂದಿ ಇಲ್ಲಿ ನೆಲೆಸಿದ್ದಾರೆ. ಈ ಸಮುದಾಯ ಸಂಪೂರ್ಣ ಮುಸ್ಲಿಂ ಪದ್ಧತಿಯನ್ನು ಅನುಸರಿಸುತ್ತದೆ. ಪಾಕಿಸ್ತಾನದ ಉಳಿದ ಸಮುದಾಯಕ್ಕೆ ಹೋಲಿಸಿದ್ರೆ ಈ ಸಮುದಾಯದ ಜನರು ಹೆಚ್ಚು ಶಿಕ್ಷಿತರಾಗಿದ್ದಾರೆ. ಇಲ್ಲಿನವರು ದೀರ್ಘಾಯುಷ್ಯಕ್ಕೆ ಕಾರಣ ತಮ್ಮ ಆಹಾರ ಎನ್ನುತ್ತಾರೆ. ವಾಲ್ನಟ್ ಸೇವನೆಯಿಂದ ಇವರು ಇಷ್ಟು ಆರೋಗ್ಯವಾಗಿದ್ದಾರೆಂದು ವರದಿ ಕೂಡ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...