alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ವೇಳೆ ಹೇಗೆ ಅಳಬೇಕು? ತರಬೇತಿ ಪಡೆಯುತ್ತಿದ್ದಾರೆ ಹುಡುಗಿಯರು..!

bidia_ki_taiyari_07_06_2017

ಜೀವನದ ಬದಲಾವಣೆಯ ಘಟ್ಟ ಮದುವೆ. ಈ ಕ್ಷಣವನ್ನು ಸುಂದವಾಗಿರಿಸಿಕೊಳ್ಳಲು ಪ್ರತಿಯೊಬ್ಬರು ಬಯಸ್ತಾರೆ. ಮದುವೆ ದಿನಾಂಕ ನಿಗದಿಯಾಗ್ತಾ ಇದ್ದಂತೆ ಹುಡುಗಿಯರು ಫಿಗರ್ ಬಗ್ಗೆ ಹೆಚ್ಚಿನ ಗಮನ ನೀಡಲು ಶುರುಮಾಡ್ತಾರೆ. ವ್ಯಾಯಾಮ, ಕಟ್ಟುನಿಟ್ಟಿನ ಆಹಾರ ಪದ್ದತಿ ಅನುಸರಿಸಿ ಮದುವೆಯಲ್ಲಿ ಸುಂದರವಾಗಿ ಕಾಣಬೇಕೆಂಬ ಕಾರಣಕ್ಕೆ ಕಸರತ್ತು ಮಾಡ್ತಾರೆ.

ಶಾಪಿಂಗ್, ಮದುವೆ ತಯಾರಿ ಜೊತೆಗೆ ಹುಡುಗಿಯರು ಮಹತ್ವ ನೀಡೋದು ಮೇಕಪ್ ಗೆ. ಮದುವೆಯಲ್ಲಿ ಎಲ್ಲರನ್ನು ಸೆಳೆಯುವಂತಹ, ಕ್ಯಾಮರಾಕ್ಕೆ ಸೂಕ್ತವೆನಿಸುವ ಮೇಕಪ್ ಗೆ ಹುಡುಗಿಯರು ಆದ್ಯತೆ ನೀಡ್ತಾರೆ. ಮದುವೆಗೆ ತಿಂಗಳಿರುವಾಗಲೇ ಬ್ಯೂಟಿಪಾರ್ಲರ್ ಬಾಗಿಲು ತಟ್ಟಿರುತ್ತಾರೆ.

ಅಪ್ಪನ ಮನೆಯಿಂದ ಗಂಡನ ಮನೆಗೆ ಹೋಗುವಾಗ ಹುಡುಗಿ ಕಣ್ಣಲ್ಲಿ ನೀರು ಬರೋದು ಸಾಮಾನ್ಯ. ಅಪ್ಪ-ಅಮ್ಮನನ್ನು ಬಿಟ್ಟು ಹೊಸ ಮನೆಗೆ ಹೋಗುವ ಆತಂಕಕ್ಕೆ ವಧು ಕಣ್ಣೀರು ಹಾಕ್ತಾಳೆ. ಆದ್ರೆ ಇದೂ ಈಗ ಕೃತಕವಾಗ್ತಾ ಇದೆ. ಅಳುವ ವೇಳೆ ಮೇಕಪ್ ಹಾಳಾಗುತ್ತೆ. ಕೆಲವೊಮ್ಮೆ ಉಕ್ಕಿ ಬರುವ ಅಳು ಬೇರೆಯವರ ಮುಂದೆ ಮುಜುಗರ ತರಿಸುತ್ತದೆ. ಹಾಗಾಗಿ ವಿದಾಯ ವೇಳೆ ಹೇಗೆ ಅಳಬೇಕು? ಅತ್ತರೂ ಹಾಳಾಗದ ಮೇಕಪ್ ಯಾವುದು ಎಂಬೆಲ್ಲ ಮಾಹಿತಿಯನ್ನು ಹುಡುಗಿಯರು ಪಡೆಯುತ್ತಿದ್ದಾರೆ. ಮಹಾನಗರಗಳಲ್ಲಿ ನಿಶ್ಚಿತಾರ್ಥವಾದ ಹುಡುಗಿಯರು ಈ ಬಗ್ಗೆ ತರಬೇತಿ ಪಡೆಯುತ್ತಿರುವುದು ವಿಶೇಷ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...