alex Certify
ಕನ್ನಡ ದುನಿಯಾ       Mobile App
       

Kannada Duniya

ಸುಂದರವಾಗಿ ಕಾಣಲು ಪ್ರಿಯಾಂಕ ಎಷ್ಟು ಖರ್ಚು ಮಾಡ್ತಾಳೆ ಗೊತ್ತಾ?

priyanka-chopra_1474947456

ಸದ್ಯ ಹಾಲಿವುಡ್ ನಲ್ಲಿ ಪ್ರಿಯಾಂಕ ಚೋಪ್ರಾ ಸದ್ದು ಮಾಡ್ತಿದ್ದಾಳೆ. ಬಾಲಿವುಡ್ ನ ಯಾವುದೇ ಚಿತ್ರ ಮಾಡಲು ಆಕೆ ಬಳಿ ಟೈಂ ಇಲ್ಲ. ಪ್ರಸಿದ್ಧ ಟಿವಿ ಶೋ ಕ್ವಾಂಟಿಕೊ ಸೀಸನ್ 2 ಶುರುವಾಗಿದ್ದು, ಪಿಗ್ಗಿ ಇದ್ರಲ್ಲಿ ಬ್ಯುಸಿಯಾಗಿದ್ದಾಳೆ. ಈ ಶೋನಲ್ಲಿ ಪ್ರಿಯಾಂಕ ಸಾಕಷ್ಟು ಸೆಕ್ಸಿ ಹಾಗೂ ಹಾಟ್ ಆಗಿ ಕಾಣ್ತಿದ್ದಾಳೆ. ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾಳೆ ಪ್ರಿಯಾಂಕ. ಇದಕ್ಕೆ ಸಂಬಂಧಿಸಿದಂತೆ ಇಂದು ನಾವು ಆಶ್ಚರ್ಯ ಹುಟ್ಟಿಸುವಂತಹ ವಿಷಯವೊಂದನ್ನು ನಿಮ್ಮ ಮುಂದಿಡ್ತೇವೆ.

ವರದಿಯೊಂದರ ಪ್ರಕಾರ ತನ್ನ ಸೌಂದರ್ಯಕ್ಕಾಗಿ ಪ್ರಿಯಾಂಕ ಪ್ರತಿ ತಿಂಗಳು 1 ಲಕ್ಷ ರೂಪಾಯಿ ಖರ್ಚು ಮಾಡ್ತಿದ್ದಾಳಂತೆ. ಪಿಗ್ಗಿ ಬಳಸುವ ಸ್ಕಿನ್ ಕ್ರೀಂ ಬೆಲೆ 42 ಸಾವಿರ ರೂಪಾಯಿ. ಮೇಕಪ್ ಹಾಗೂ ಕೂದಲಿನ ಆರೈಕೆಗಾಗಿ 38 ಸಾವಿರ ಖರ್ಚಾಗ್ತಾ ಇದೆ. ಇದ್ರಲ್ಲಿ ಶಾಂಪೂ, ಕಂಡೀಷನರ್ ಕೂಡ ಸೇರಿದೆ. ಇದಲ್ಲದೆ ಸೆಂಟ್ ಗಾಗಿ 13 ಸಾವಿರ ವೆಚ್ಛ ಮಾಡ್ತಾಳೆ ಪ್ರಿಯಾಂಕ.

ಅಂತರಾಷ್ಟ್ರೀಯ ಉತ್ಪನ್ನಗಳನ್ನು ಪ್ರಿಯಾಂಕ ಬಳಕೆ ಮಾಡ್ತಾಳೆ. ಟಿವಿ ಶೋನಲ್ಲಿ ಪಾಲ್ಗೊಳ್ಳಲು ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟಿಯರಲ್ಲಿ ಪ್ರಿಯಾಂಕ ಮೊದಲನೇ ಸ್ಥಾನದಲ್ಲಿದ್ದಾಳೆ. ಫೋರ್ಬ್ಸ್ ನಿಯತಕಾಲಿಕ ಪಟ್ಟಿಯಲ್ಲಿ ಪ್ರಿಯಾಂಕ 10ನೇ ಸ್ಥಾನದಲ್ಲಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...